ಕುಂಬಳೆ: ಸ್ಕೂಟರಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕಾಡುಹಂದಿ ತಿವಿದ ಪರಿಣಾಮ ಯುವಕ ಗಾಯಗೊಂಡಿದ್ದಾರೆ. ಬಾಡೂರು ನಿವಾಸಿ ಕೆ. ವಿನೀಷ್ ಕುಮಾರ್ (36)ಗಾಯಾಳು. ರಾತ್ರಿ ಬಾಡೂರು ವಾಷನಾಲಯದಿಂದ ಸ್ಕೂಟರಲ್ಲಿ ಮನೆಗೆ ಸಂಚರಿಸುತ್ತಿದ್ದ ಸಂದರ್ಭ ಕಾಡುಹಂದಿ ಏಕಾಏಕಿ ಇವರ ಮೇಲೆರಗಿದೆ. ಇವರ ಕೈ ಮತ್ತು ಕಾಲಿಗೆ ಗಾಯಗಳುಂಟಾಗಿದ್ದು, ಆಸ್ಪತ್ರೆಗೆ ದಾಖಲಾಘಿದ್ದಾರೆ.

