HEALTH TIPS

ಕಲಬೆರಕೆ ಅಡುಗೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಮಾರಾಟ ಕಂಪ್ಲೀಟ್ ಬ್ಯಾನ್: ನಿಯಮ ಮೀರಿದರೆ ಜೈಲು ಗ್ಯಾರಂಟಿ!

 ಮುಂಬೈ : ಕೆಲಸದ ಒತ್ತಡವೋ ಇಲ್ಲ ಮತ್ತೊಂದು ಕಾರ್ಯದ ನಿಮಿತ್ತವೋ ಜನರು ಇಂದು ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಹೊರಗಡೆ ಊಟ-ತಿಂಡಿ ಮಾಡುತ್ತಾರೆ. ಆದರೆ, ಹೀಗೆ ಹೊರಗೆ ತಿನ್ನುವ ಸಮಯದಲ್ಲಿ ಕೆಲವು ಹೋಟೆಲುಗಳಲ್ಲಿ ಕಲಬೆರಕೆ ಅದರಲ್ಲೂ, ಪ್ಯಾಕ್ ಮಾಡದ ಲೂಸ್ ಅಡುಗೆ ಎಣ್ಣೆಯನ್ನೇ ಬಳಕೆ ಮಾಡುತ್ತಾರೆ. ಆದರೆ, ಹೀಗೆ  ಲೂಸ್ ಅಡುಗೆ ಎಣ್ಣೆ ಮಾಡುವವರ ವಿರುದ್ದ ಕಠಿಣ ಸಮರ ಸಾರಿರುವ ಸರ್ಕಾರ, ಅಡುಗೆ ಎಣ್ಣೆಯ ಹೆಸರಿನಲ್ಲಿ ನಡೆಯುತ್ತಿದ್ದ ಮೋಸಕ್ಕೆ ಬ್ರೇಕ್ ಹಾಕಲು ಹೊಸ ಕ್ರಾಂತಿಕಾರಿ ಆದೇಶ ಹೊರಬಿದ್ದಿದೆ. ಅದುವೇ, ಪ್ಯಾಕ್ ಮಾಡದ (ಲೂಸ್) ಅಡುಗೆ ಎಣ್ಣೆ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:


ಹೌದು, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾದ ತುಕಾರಾಮ್ ಮುಂಡೆ ಅವರು ಇಡೀ ಮಹಾರಾಷ್ಟ್ರ ರಾಜ್ಯಾದ್ಯಂತ ಪ್ಯಾಕ್ ಮಾಡದ (ಲೂಸ್) ಅಡುಗೆ ಎಣ್ಣೆ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾತನಾಡಿದ, ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಡೆ, "ಬಡ ಮತ್ತು ಸಾಮಾನ್ಯ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಲೂಸ್ ಎಣ್ಣೆಯನ್ನು ಖರೀದಿಸುವುದರಿಂದ ಅವರ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ. ಕಲಬೆರಕೆ ಎಣ್ಣೆ ಹಾಗೂ ಪದೇ ಪದೇ ಕಾಯಿಸಿದ ಎಣ್ಣೆಯನ್ನು ಬಳಸುವುದರಿಂದ ಕ್ಯಾನ್ಸರ್, ಲಿವರ್ ಸಮಸ್ಯೆ, ಪಾರ್ಶ್ವವಾಯು (Stroke) ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ನಿಷೇಧ ಹೇರಲು ಮುಖ್ಯ ಕಾರಣವೇನು?

ಮಾರುಕಟ್ಟೆಯಲ್ಲಿ ಲೂಸ್ ಆಗಿ ಮಾರಾಟವಾಗುವ ಅಡುಗೆ ಎಣ್ಣೆಗಳಲ್ಲಿ ಅತಿ ಹೆಚ್ಚು ಕಲಬೆರಕೆ ನಡೆಯುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಕಡಿಮೆ ಬೆಲೆಯ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಅಡುಗೆ ಎಣ್ಣೆಯಗಳನ್ನು ಇಂತಹ ಲೂಸ್ ಎಣ್ಣೆಯಲ್ಲಿ ಮಿಶ್ರಣ ಮಾಡಿ ಗ್ರಾಹಕರಿಗೆ ವಂಚಿಸಲಾಗುತ್ತಿತ್ತು. ಇಂತಹ ಕಲಬೆರಕೆ ಎಣ್ಣೆಯನ್ನು ದೀರ್ಘಕಾಲ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕಲಬೆರಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕುವ ಉದ್ದೇಶದಿಂದ ಆಹಾರ ಮತ್ತು ಔಷಧ ಆಡಳಿತವು ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಅದರಂತೆ, ಇನ್ಮುಂದೆ ಯಾವುದೇ ರೀತಿಯ ಅಡುಗೆ ಎಣ್ಣೆಯನ್ನು ಲೂಸ್ ಆಗಿ ಮಾರಾಟ ಮಾಡುವಂತಿಲ್ಲ. ಎಣ್ಣೆಯನ್ನು ಕಡ್ಡಾಯವಾಗಿ ಸಂಪೂರ್ಣ ಮೊಹರು ಮಾಡಿದ ಮತ್ತು ಲೇಬಲ್ ಇರುವ ಪ್ಯಾಕೆಟ್ ಅಥವಾ ಡಬ್ಬಾಗಳಲ್ಲೇ ಮಾರಾಟ ಮಾಡಬೇಕು. ಇದರೊಂದಿಗೆ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಮರು-ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಅಕಸ್ಮಾತ್, ಕಲಬೆರಕೆ ಹಾಗೂ ಅಸುರಕ್ಷಿತ ತೈಲ ಮಾರಾಟ ಮಾಡುವುದು ಸಾಬೀತಾದರೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ, ನಿಯಮ ಉಲ್ಲಂಘಿಸುವ ತಯಾರಕರು, ವಿತರಕರು ಅಥವಾ ಗಿರಣಿ ಮಾಲೀಕರಿಗೆ ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ಭಾರಿ ದಂಡ ವಿಧಿಸಬಹುದು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries