ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯು ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ಭಾನುವಾರ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಾಯೋಜಿತ ಯಕ್ಷಗಾನ ಬಯಲಾಟ ಅಷ್ಟಾಹ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಆರಂಭಗೊಂಡಿತು. ಭಾನುವಾರ ಲೀಲಾಮಾನುಷ ವಿಗ್ರಹ, ಸೋಮವಾರ ಮಾಯಾವಿಹಾರಿ ಪ್ರಸಂಗಗಳು ಪ್ರದರ್ಶನಗೊಂಡಿತು.
ಇಂದು ಆ.4ರಂದು ತಪೋನಂದನ, ಆ.5 ರಂದು ಕನ್ಯಾಂತರಂಗ ಜಾಂಬವತಿ ಕಲ್ಯಾಣ, ಆ.6 ರಂದು ಪಾದಪ್ರತೀಕ್ಷಾ, ಆ.7 ರಂದು ಮಧುಚಕ್ರ, ಆ.8 ರಂದು ಸುರತರಂಗಿಣಿ, ಆ.9 ರಂದು ಶಶಿವಂಶ ವಲ್ಲರಿ ಎಂಬ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಆ.9 ರಂದು ಸಂಜೆ ಸಮಾರೋಪ ಸಮಾರಂಭ ಜರಗಲಿದೆ.
ಸೋಮವಾರ ಬೆಳಿಗ್ಗೆ ಮಧೂರಿನ ರಾಗಸುಧಾ ಭಜನಾ ವೃಂದದವರಿಂದ ಭಜನಾ ಸಂಕೀರ್ತನೆ ನಡೆಯಿತು.

-side.jpg)
.jpg)
