ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್‍ನ ನೇತೃತ್ವದಲ್ಲಿ ಭಾನುವಾರ ಮಳೆ ಸೊಬಗು ಕಾರ್ಯಕ್ರಮ ಮುನಿಯೂರಿನ ನೇರಪ್ಪಾಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೆಶೋದಾ ಎನ್. ಉದ್ಘಾಟಿಸಿ ಮಾತನಾಡಿದರು. ಕುಟುಂಬಶ್ರೀ ಸಿಡಿಎಸ್ ಚೇರ್‍ಪರ್ಸನ್ ರಾಗಿಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲಾ ಮಿಷನ್ ಎಡಿಎಂಸಿ ಕಿಶೋರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಕ್ಷೇಮ ಕಾರ್ಯಸ್ಥಾಯಿ ಸಮಿತಿ ಅಧ್ಯಕ್ಷ ಅಬೂಬಕರ್, ಸದಸ್ಯರುಗಳಾದ ಮಹೇಶ್ ಅಜ್ಜಿಮೂಲೆ, ಸೌಭಾಗ್ಯಲಕ್ಷ್ಮಿ, ನೂರುದ್ದೀನ್ ಬೆಳಿಂಜ, ಬಿ.ಟಿ.ಅಬ್ದುಲ್‍ಕುಂಞ, ಎಸ್.ಮೊಹಮ್ಮದ್ ಕುಂಞ, ಗೀತಾ ಡಿ., ಬಬಿತಾ ರೇಷ್ಮಾ, ಕೊರಗಪ್ಪ ಬೆಳ್ಳಿಗೆ, ಸಿಡಿಎಸ್ ಉಪಾಧ್ಯಕ್ಷೆ ರೋಶಿನಿ, ಸಿಡಿಎಸ್ ಸದಸ್ಯರುಗಳು, ಸಿಡಿಎಸ್ ಲೆಕ್ಕ ಪರಿಶೋಧಕಿ, ಕುಟುಂಬಶ್ರೀ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಸದಸ್ಯೆ ಚಂದ್ರಾವತಿ ಸ್ವಾಗತಿಸಿ, ಉಪಾಧ್ಯಕ್ಷೆ ರೋಶಿ ನಿರ್ವಹಿಸಿದರು. ಮಹೇಶ್ ಅಜ್ಜಿಮೂಲೆ ಕಾರ್ಯಕ್ರಮ ಸಂಯೋಜಿಸಿದ್ದರು.

.jpg)
.jpg)
