ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಚುನಾವಣೆಯನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ನಡೆಸಲಾಯಿತು. ವಿವಿಧ ಚುನಾವಣಾ ಚಿಹ್ನೆಗಳಡಿ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಯಾಗಿದ್ದ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರಿಗೆ ಸಲ್ಲಿಸಿದರು. ಶಾಲಾ ಶಿಕ್ಷಕ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳೇ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕಿ ಆಯಿಷತ್ ಸೈನಾಜ್ ಅವರ ಮುಂದಾಳುತ್ವದಲ್ಲಿ ಮತ ಎಣಿಕೆ ನಡೆಯಿತು. ಚುನಾವಣೆಯಲ್ಲಿ ರೆಹ್ಮಾನ್ ಶಾಲಾ ನಾಯಕರಾಗಿ ಆಯ್ಕೆಯಾದರೆ, ಅಬಿಯಾ ಹಾನನ್, ಮಹಮ್ಮದ್ ಜಲಾಲ್, ಮಹಮ್ಮದ್ ಹಿಶಾನ್ ಹಾಗೂ ಮೊಹೀನುದ್ದೀನ್ ಅಯಾನ್ ಅವರನ್ನು ಆರೋಗ್ಯ, ಆಹಾರ, ಕ್ರೀಡೆ ಮತ್ತು ಶಿಕ್ಷಣ ಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು. ಬಳಿಕ ವಿಜಯೋತ್ಸವದ ಮೆರವಣಿಗೆ ನಡೆಯಿತು.
ಬಿ.ಆರ್.ಸಿ ಮಂಜೇಶ್ವರದ ಬಿ.ಪಿ.ಸಿ. ರಾಜಗೋಪಾಲನ್ ಹಾಗೂ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫ್ ಅವರು ವಿಜೇತರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ನೂತನ ಪಿ.ಟಿ.ಎ ಸಮಿತಿಯ ಸಮ್ಮುಖದಲ್ಲಿ ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಅವರು ಸತ್ಯಪ್ರತಿಜ್ಞೆ ಬೋಧಿಸಿದರು. ಪ್ರತಿ ಮಂತ್ರಿಗಳಿಗೆ ಮಾರ್ಗದರ್ಶಕರಾಗಿ ಶಿಕ್ಷಕಿಯರಾದ ಐಶ್ವರ್ಯ ಹಾಗೂ ಅನುಕೃಷ್ಣ ಅವರನ್ನು ನಿಯೋಜಿಸಲಾಯಿತು. ಶಿಕ್ಷಕಿ ಧನ್ಯ ಅವರು ಶಾಲಾ ಆಡಳಿತ, ಮಂತ್ರಿಗಳ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಇದರಿಂದ ವಿದ್ಯಾರ್ಥಿಗಳು ಚುನಾವಣೆಯ ಅಗತ್ಯ ಮತ್ತು ಸರ್ಕಾರದ ಔಚಿತ್ಯವನ್ನು ಮನಗಂಡರು. ಶಿಕ್ಷಕಿ ರೇಷ್ಮಾ ಸ್ವಾಗತಿಸಿ, ಜಸೀಲಾ ವಂದಿಸಿದರು.ಈ ಮೂಲಕ ಮುಳಿಂಜ ಶಾಲೆಯಲ್ಲಿ ನೂತನ ಶಾಲಾ ಪಾರ್ಲಿಮೆಂಟ್ ಅಧಿಕೃತವಾಗಿ ರೂಪೀಕರಿಸಲಾಯಿತು.

.jpg)
.jpg)
