: ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆಯು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ಆ.8 ರಂದು ಶನಿವಾರ ಯಕ್ಷಚಿಗುರು -2026 ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಂಡಿದೆ.
ತಾಳಮದ್ದಳೆ, ಸಭಾ ಸಮಾರಂಭ, ಯಕ್ಷಚಿಗುರು 2026 ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ಜರಗಲಿದೆ. ಅಪರಾಹ್ನ 2. ರಿಂದ ನಾಡಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜಾಬಾಲಿ ನಂದಿನಿ ಪ್ರಸ್ತುತಿಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರು ದೇವಿಪ್ರಸಾದ ಆಳ್ವ ತಲಪಾಡಿ, ಮದ್ದಳೆಯಲ್ಲಿ ಮಧ್ವರಾಜ ಅಡಿಗ, ಚೆಂಡೆ ಜಿತೇಶ್ ದೇವಾಡಿಗ ಕೋಳ್ಯೂರು ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪ್ರೊ. ಪವನ್ ಕಿರಣ್ ಕೆರೆ, ರಾಜಾರಾಮ ರಾವ್ ಮೀಯಪದವು ರಂಜಿಸಲಿದ್ದಾರೆ.
ಬಳಿಕ ಸಂಜೆ 5. ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್, ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಇದರ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸಭಾಧ್ಯಕ್ಷತೆ ವಹಿಸುವರು. ಮುಖ್ಯ ಅಭ್ಯಾಗತರಾಗಿ ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಇದರ ಸಂಚಾಲಕ ರಾಜಾರಾಮ ಭಟ್, ವೈದ್ಯ ಡಾ. ಟಿ. ಹರಿಕಿರಣ್ ಬಂಗೇರ, ವೇದಮೂರ್ತಿ ಶ್ರೀಕೃಷ್ಣ ಮಯ್ಯ ಉಪಸ್ಥಿತರಿರುವರು. ಶ್ರೀ ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಸಂಘದ ಹಿರಿಯ ಸದಸ್ಯ ರಾಜಾರಾಮ ಹೊಳ್ಳ ಕೈರಂಗಳ ಉಪಸ್ಥಿತರಿರುವರು. ಯಕ್ಷ ಚಿಗುರು 2026 ಪ್ರಶಸ್ತಿಯನ್ನು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಸಂಸ್ಥೆಗೆ ಪ್ರದಾನ ಮಾಡಲಾಗುವುದು. ಬಳಿಕ ಶ್ರೀಗುರುನರಸಿಂಹ ಯಕ್ಷಬಳಗ ತಂಡದವರಿಂದ ಭೀಷ್ಮ ಪ್ರತಿಜ್ಞೆ, ಕುಶಲವರಕಾಳಗ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.

