ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಆಸರೆಯ 17ನೇ ಸೇವಾ ಯೋಜನೆಯನ್ನು ಕುಲಾಲ ಸಂಘ ಪುತ್ತಿಗೆ ಶಾಖೆಗೋಳಪಟ್ಟ ಎಯ್ಯೂರಿನ ರಾಜೇಶ್ ಕುಲಾಲ್ ಅವರ ಪತ್ನಿ ರುಕ್ಮಿಣಿ ಅವರ ಚಿಕಿತ್ಸೆಗೆ ಧನ ಸಹಾಯದ ಚೆಕ್ ನ್ನು ಭಾನುವಾರ ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಹಸ್ತಾoತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ, ಮಂಜೇಶ್ವರ ಕುಲಾಲ ಪಂಚಾಯತಿ ಶಾಖೆಯ ಅಧ್ಯಕ್ಷ ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಪುತ್ತಿಗೆ ಕುಲಾಲ ಪಂಚಾಯತಿ ಶಾಖೆಯ ಗೌರವಾಧ್ಯಕ್ಷ ಅಮ್ಮು ಮಾಸ್ತರ್ ಅಂಗಡಿಮೊಗರು, ಜಿಲ್ಲಾ ಕುಲಾಲ ಸಂಘದ ಕೋಶಾಧಿಕಾರಿ ಈಶ್ವರ್ ಕಣ್ವತೀರ್ಥ, ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ಭೋಜ ಮಾಸ್ತರ್ ಪಾವೂರು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ತಾರಾನಾಥ ಕಣ್ವತೀರ್ಥ, ಆನಂದ ಕಣ್ವತೀರ್ಥ, ಪ್ರಸಾದ್ ತೂಮಿನಾಡು, ಉದಯ ಕುಮಾರ್ ಕಣ್ವತೀರ್ಥ, ಸುರೇಶ್ ಉಪಸ್ಥಿತರಿದ್ದರು. ಯೋಜನೆಯ
ಯಶಸ್ವಿಗೆ ಸಹಕರಿಸಿದ ಸಹೃದಯ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘ ಅಭಿನಂದನೆ ವ್ಯಕ್ತಪಡಿಸಿದೆ.

.jpg)
.jpg)
