HEALTH TIPS

ಪ್ರಧಾನಿ ಮೋದಿ ಜತೆ ಫೋಟೊ ಶೂಟ್: 'ನಾರಿ ಶಕ್ತಿ' ಸಂದೇಶ ಸಾರಿದ ಬಿಜೆಪಿಯ ಹೊಸ ತಂಡ

 ನವದೆಹಲಿ: ಲೋಕಸಭೆ ಹಾಗೂ ಮುಂಬರುವ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿಯು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಘೋಷಿಸಿದೆ. ಈ ತಂಡವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋಟೊ ಶೂಟ್ ನಡೆಸಿದ್ದು, ಗಮನ ಸೆಳೆದಿದೆ. 


ಮಹಿಳಾ ನಾಯಕಿಯರು ಮೊದಲ ಸಾಲಿನಲ್ಲಿ ನಿಲ್ಲುವ ಮೂಲಕ, ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಮಹಿಳೆಯರಿಗೆ ನೀಡಲಾದ ಆದ್ಯತೆಯನ್ನು ಎತ್ತಿ ತೋರಿಸಲಾಗಿದೆ.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ್ ಕುಮಾರಿ ಚೌಧರಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾರಾಜೆ ಸಿಂಧಿಯಾ, ಮಾಜಿ ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್, ಹಿರಿಯ ನಾಯಕಿ ರೇಖಾ ವರ್ಮಾ ಮತ್ತು ಡಿ. ಪುರಂದೇಶ್ವರಿ ಸೇರಿದಂತೆ ಹಲವು ಹಿರಿಯ ಮಹಿಳಾ ನಾಯಕಿಯರು ಒಂದಾಗಿ ಕಾಣಿಸಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಆಗಸ್ಟ್ 17ರಂದು ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಈ ಫೋಟೊ ಶೂಟ್ ನಡೆದಿದೆ.


Organisational meetings are all about new ideas and perspectives aimed at strengthening the Party and deepening connect with the people. Great interaction with fellow Party colleagues and the new organisational team!




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries