ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಸ್ಕೂಲಿನ 22 ಸ್ಕೌಟ್ ವಿದ್ಯಾರ್ಥಿಗಳು ರಾಜೇಶ್ ಶೆಟ್ಟಿ ಕೊಡ್ಲಮೊಗರು ಇವರ ಗದ್ದೆಯಲ್ಲಿ ನೇಜಿ ನೆಟ್ಟು ಭತ್ತ ಕೃಷಿಯ ಬಗ್ಗೆ ಮಾಹಿತಿ ಪಡೆದರು. ಮುಖ್ಯ ಶಿಕ್ಷಕಿ ಕೃಷ್ಣವೇಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾವು ಸೇವಿಸುವ ಆಹಾರವನ್ನು ನಾವೇ ಬೆಳೆಸಿದರೆ ಸ್ವಾವಲಂಬನೆ ಸಾಧ್ಯವಾಗುತ್ತದೆ. ಇದರ ಪೂರ್ವಭಾವಿಯಾಗಿ ಆಹಾರ ವಸ್ತು ಬೆಳೆಸುವ ವಿಧಾನಗಳು, ಕೃಷಿ ಚಟುವಟಿಕೆಗಳ ಸಮಗ್ರ ಮಾಹಿತಿ ಅಗತ್ಯ ಎಂದರು. ಕೃಷಿಕ ದೇಶದ ಬೆನ್ನುಲುಬು, ವಿದ್ಯಾರ್ಥಿಗಳು ಎಳವೆಯಲ್ಲಿ ಕೃಷಿ ಬಗ್ಗೆ ಆಸಕ್ತಿ ಹೊಂದಬೇಕು. ಆಹಾರವನ್ನು ನಾವೇ ಬೆಳೆಸಿದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದರು. ಸ್ಕೌಟ್ ಅಧ್ಯಾಪಕ ಸತ್ಯ ಶಂಕರ್ ನೇತೃತ್ವ ನೀಡಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.

.jpg)
