ಕಾಸರಗೋಡು: ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಪ್ರಖಂಡ ವತಿಯಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕಾಸರಗೋಡು ನಗರದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಮನೆ ಮನೆ ಭಜನೆ, ಶ್ರೀ ರಾಮನ ಸ್ಮರಣೆಯೊಂದಿಗೆ ಧರ್ಮ ಜಾಗೃತಿ ಮೂಡಿಸುವ ರಾಮಾಯಣ ಸಂಕೀರ್ತನಾ ಸತ್ಸಂಗಕ್ಕೆಚಾಲನೆ ನೀಡಲಾಯಿತು.
ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಅರ್ಚಕ ಸೂರ್ಯನಾರಾಣ ಪುರೋಹಿತ ಅವರು ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು. ಇದೇ ಸಂದರ್ಭ ಶ್ರೀ ರಾಮ ದೇವರಿಗೆ ಮಂಳಾರತಿ ಹಾಗೂ ಶ್ರೀ ವೆಂಕಟರಮಣ ದೇವರಿಗೆ ವಿಶೇಷ ಪೂಜೆ ನಡೆಯಿತು.
ಭಜನಾ ಸಂಕೀರ್ತನಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ, ಕಾರ್ಯದರ್ಶಿ ಕಿಶೋರ್ ಎಸ್.ವಿ.ಟಿ, ವಸಂತ್ ಕೆರೆಮನೆ, ಪುರಂದರ ಶೆಟ್ಟಿ, ನಾರಾಯಣ ಆಚಾರ್ಯ, ಕಾರ್ತಿಕ್, ಸಂತೋಷ್ ಭಂಡಾರಿ, ಸತ್ಯಸಾಯಿ, ಕಿಶೋರ್ ಬೀರಂತಬೈಲ್, ಶಂಕರ ನಾರಾಯಣ ಹೊಳ್ಳ, ಶಿವಶಂಕರ ಅಡಿಗ, ನವೀನ್ ಅಶೋಕನಗರ, ರವಿ ಕೇಸರಿ, ಪ್ರಮೋದ್, ಶೇಷಾದ್ರಿ ಹೊಳ್ಳ, ಶ್ರೀನಿವಾಸ ಹೊಳ್ಳ, ನಾಮದೇವ ಪೈ, ಸಾಯಿನಾಥ್ ರಾವ್, ಶ್ರೀನಿವಾಸ ಮಲ್ಯ, ಸವಿತಾ, ವಿಜಯ ಶೆಟ್ಟಿ, ಅರುಣ, ಶ್ರೀಲತಾ ಟೀಚರ್, ಪ್ರೇಮಾ, ಶ್ರೀ ದೇವಿ, ಸೌಮ್ಯ, ಶ್ರೀವಳ್ಳಿ, ಸರಸ್ವತಿ, ಪ್ರಭಾ ಶೆಣೈ, ನಳಿನಿ, ಶಾರದಾ ರಾವ್, ಅಪೂರ್ವ, ಸವಿತಾ ಆಳ್ವ, ರೂಪಕಲಾ ಹೊಳ್ಳ, ಗೀತಾ, ರಮ್ಯ, ಅದಿತಿ ಅನನ್ಯ, ಅನುಶ್ರೀ, ಚಿಂತನ ಛಾಯಾಶ್ರೀ, ಶಾಲಿಕ, ಪ್ರಣಾಮ್ಯ ಉಪಸ್ಥಿತರಿದ್ದರು.
ಹಾರ್ಮೋನಿಯಂ ನಲ್ಲಿ ತುಕರಾಮ ಆಚಾರ್ಯ ಕೆರೆಮನೆ ತಬಲಾದಲ್ಲಿ ಕೇತನ್, ಮನ್ವಿತ್, ತೃಷನ್ ಸಹಕರಿಸಿದರು.



