HEALTH TIPS

ಮಿಲಾದುನ್ನಬಿ-ಕಾಸರಗೋಡಿನಲ್ಲಿ ಸಂಭ್ರಮದ ಕಾರ್ಯಕ್ರಮ

ಕಾಸರಗೋಡು: ಪ್ರವಾದಿ ನಬಿ ದಿನಾಚರಣೆ ಮಿಲಾದುನ್ನಬಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಘಿತ್ತು. ಆಗಾಗ ಬಿರುಸಿನ ಮಳೆಯಾಗುತ್ತಿದ್ದರೂ, ಅಡಚಣೆಯಿಲ್ಲದೆ ಕಾರ್ಯಕ್ರಮ ನೆರವೇರಿತ್ತು.  ಮುಖ್ಯವಾಗಿ ಮದ್ರಸಾಗಳನ್ನು ಕೇಂದ್ರವಾಗಿಟ್ಟುಕೊಂಡು, ಮಹಲ್, ಜಮಾಅತ್‍ಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ 'ನಬಿ ದಿನ'ದ  ಮೆರವಣಿಗೆಗಳನ್ನು ನಡೆಸಲಾಯಿತು. ಮದರಸಾಗಳ ವಿದ್ಯಾರ್ಥಿಗಳು ಪೆÇೀಷಕರು ಮತ್ತು ಶಿಕ್ಷಕರೊಂದಿಗೆ ಮೆರವಣಿಗೆಗಳಲ್ಲಿ ಪಾಲ್ಗೊಂಡರು.  ನಬಿ ದಿನಾಚರಣೆಯ ಅಂಗವಾಗಿ ವಿವಿಧ ಮದರಸಾಗಳಲ್ಲಿ ಕಲೆ ಮತ್ತು ಸಾಹಿತ್ಯ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು.


ಕಾಸರಗೋಡು ತಳಂಗರೆಯ ಮಾಲಿಕ್‍ದೀನಾರ್ ಮಸೀದಿ ಎದುರು ಸುಮಾರು 25 ಮದರಸಾಗಳ ವಿದ್ಯಾರ್ಥಿಗಳು,   ಮಲಿಕ್ ದಿನಾರ್ ಮಸೀದಿಯನ್ನು ಕೇಂದ್ರವಾಗಿಟ್ಟುಕೊಂಡು ಮೆರವಣಿಗೆ, ದಫ್‍ಮುಟ್, ಕೋಲ್ಕಳಿ ಪ್ರದರ್ಶಿಸಿದರು.   ತಳಂಗರೆ ಮಾಲಿಕ್‍ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ, 

ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ 'ಡಫ್ ಮುಟ್', 'ಕೋಲ್ಕಳಿ' ಮತ್ತು ಸಮವಸ್ತ್ರಧಾರಿ ಬಾಲಕರ ವಿವಿಧ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರಗು ನೀಡಿತು.   ಮೆರವಣಿಗೆಯ ಮಾರ್ಗದುದ್ದಕ್ಕೂ ವಿವಿಧ ಕೇಂದ್ರಗಳಲ್ಲಿ 'ಡಫ್ ಮುಟ್' ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳ ವತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಕ್ಕಳಿಗೆ ಸಿಹಿತಿಂಡಿ ಹಾಗೂ  ಪಾನೀಯಗಳನ್ನು ನೀಡಿ ಸ್ವಾಗತಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries