HEALTH TIPS

ಹಾರ್ಮುಝ್ ಜಲಸಂಧಿ | UAE ತೈಲ ನೌಕೆ ಮೇಲೆ ಕ್ಷಿಪಣಿ ದಾಳಿ

 ಅಬುಧಾಬಿ: ಶನಿವಾರ ಬೆಳಗ್ಗೆ ಹಾರ್ಮುಝ್ ಜಲಸಂಧಿಯ ಮಾರ್ಗವಾಗಿ ಸಾಗುತ್ತಿದ್ದ ತನಗೆ ಸೇರಿದ ತೈಲ ನೌಕೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಅಡ್ನಾಕ್) ತಿಳಿಸಿದೆ.


ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು `ಅಡ್ನಾಕ್' ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಬುಧಾಬಿಯ ಸರ್ಕಾರಿ ಸ್ವಾಮ್ಯದ ಈ ತೈಲ ಸಂಸ್ಥೆಯು ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಲ್ಲಿ ಒಂದಾಗಿದ್ದು, ಜಾಗತಿಕ ಗ್ರಾಹಕರಿಗೆ ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ಈ ದಾಳಿಯು ಭದ್ರತಾ ಮಂಡಳಿಯ ನಿರ್ಣಯ 2817 ರ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಯುಎಇ ವಿದೇಶಾಂಗ ಸಚಿವಾಲಯವು ಖಂಡಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries