ಕಠ್ಮಂಡು (PTI): ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ ಬುಧವಾರ 1365ಕ್ಕೆ ಏರಿಕೆಯಾಗಿದೆ.
ನಾಪತ್ತೆಯಾಗಿರುವ 589 ವಿದೇಶಿಗರು ಸೇರಿದಂತೆ 5,326 ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ನೇಪಾಳ ಪೊಲೀಸ್ ಪ್ರಕಟಣೆ ತಿಳಿಸಿದೆ.
ಈವರೆಗೆ 102 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತು ಪತ್ತೆಯಾಗದ 1,147 ಮೃತದೇಹಗಳನ್ನು ಹೂಳಲಾಗಿದೆ.
ಸಂಸದೀಯ ಉಪಸಮಿತಿ ರಚನೆ: ಪ್ರವಾಹದಿಂದ ನೇಪಾಳದ ಆರ್ಥಿಕತೆಯ ಮೇಲಿನ ಪರಿಣಾಮ ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣಕ್ಕೆ ಸಂಬಂಧಿಸಿ ಹಣಕಾಸಿನ ಕುರಿತು ಅಧ್ಯಯನ ನಡೆಸಲು ಏಳು ಮಂದಿ ಸದಸ್ಯರನ್ನೊಳಗೊಂಡ ಸಂಸದೀಯ ಉಪ ಸಮಿತಿಯನ್ನು ಬುಧವಾರ ರಚಿಸಲಾಗಿದೆ.
ಆಡಳಿತರೂಡ ಆರ್ಎಸ್ಪಿಯ ಶಾಸಕಿ ಸುಶೀಲ ಖಡ್ಕಾ ಅವರ ನೇತೃತ್ವದಲ್ಲಿ ಸಮಿತಿ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್ 18ರೊಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.

