ವಾಷಿಂಗ್ಟನ್ (AP): ಸುಧಾರಿತ ಸಾಮರ್ಥ್ಯ ಹೊಂದಿರುವ 'ಖಾಸೆಮ್ ಬಶೀರ್' ಬ್ಯಾಲಿಸ್ಟಿಕ್ ಕ್ಷಿಪಣಿಯು ಇರಾನ್ ಸೇನೆಯ ಬಲ ಹೆಚ್ಚಿಸಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.
'ಹೊಸ ಕ್ಷಿಪಣಿಯು ಇರಾನ್‌ನ ರಕ್ಷಣಾ ಕಾರ್ಯತಂತ್ರದಲ್ಲಿ ಮಹತ್ವದ ತಿರುವು' ಎಂದು ಬಣ್ಣಿಸಿದೆ.
'ಬೆದರಿಕೆಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಾಮರ್ಥ್ಯ ಇದೆ ಎಂಬ ಸಂದೇಶವನ್ನು ಈ ಕ್ಷಿಪಣಿ ಮೂಲಕ ಇರಾನ್ ರವಾನಿ ಸಿದೆ' ಎಂದಿದೆ. ಇರಾನ್‌ನ ರಾಷ್ಟ್ರೀಯಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ರೆಜಾಯ್ ಅವರ ಹೇಳಿಕೆ ಯನ್ನು ಸುದ್ದಿಸಂಸ್ಥೆ ಉಲ್ಲೇಖಿಸಿದೆ.

