HEALTH TIPS

2027ರ ಮೇ-ಜೂನ್‌ನಲ್ಲಿ ಬುಲೆಟ್ ರೈಲು ಪರೀಕ್ಷಾರ್ಥ ಸಂಚಾರ: ಅಶ್ವಿನಿ ವೈಷ್ಣವ್

ನವದೆಹಲಿ:  ದೇಶಿಯವಾಗಿ ನಿರ್ಮಿಸಿದ ಭಾರತದ ಮೊದಲ ಬುಲೆಟ್‌ ರೈಲಿನ ಪರೀಕ್ಷೆ ಮುಂದಿನ ವರ್ಷ (2027) ಮೇ ಅಥವಾ ಜೂನ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.


2ರಿಂದ 4 ತಿಂಗಳು ಪರೀಕ್ಷೆ ನಡೆಯಲಿದ್ದು, ಬಳಿಕ ರೈಲಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಸೂರತ್-ವಾಪಿ ವಿಭಾಗದ ಕಾಮಗಾರಿ ಈ ವರ್ಷದ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ವಡೋದರಾದಲ್ಲಿ ನಡೆದ 'ವಿಕಸಿತ ಭಾರತಕ್ಕಾಗಿ ನಮೋ' ಕಾರ್ಯಕ್ರಮದಲ್ಲಿ ಮಾತನಾಡಿದ ವೈಷ್ಣವ್‌, ಬುಲೆಟ್‌ ರೈಲಿನ ಮೊದಲ ಬಾಡಿ ಫ್ರೇಮ್‌ ಇತ್ತೀಚೆಗೆ ಪೂರ್ಣಗೊಂಡಿದ್ದು, ಒತ್ತಡ ಸಾಮರ್ಥ್ಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

'ಮುಂದಿನ ವರ್ಷದ ಮೇ ಅಥವಾ ಜೂನ್‌ನಲ್ಲಿ ಸ್ವದೇಶಿ ನಿರ್ಮಿತ ಬುಲೆಟ್‌ ರೈಲು ಪರೀಕ್ಷೆಗಾಗಿ ಹಳಿಗೆ ಇಳಿಯಲಿದೆ. 2ರಿಂದ 4 ತಿಂಗಳ ಪರೀಕ್ಷೆಯ ಬಳಿಕ ಪ್ರಧಾನಿಯವರೇ ಬುಲೆಟ್‌ ರೈಲಿಗೆ ಚಾಲನೆ ನೀಡಲಿದ್ದಾರೆ' ಎಂದು ವೈಷ್ಣವ್‌ ಹೇಳಿದರು.

ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬುಲೆಟ್‌ ರೈಲಿನಲ್ಲಿ ವಡೋದರಾದಿಂದ ಮುಂಬೈಗೆ ಕೇವಲ ಒಂದೂವರೆ ಗಂಟೆಯಲ್ಲಿ ತಲುಪಬಹುದು ಎಂದರು.

ಭಾರತೀಯ ರೈಲ್ವೆಯಲ್ಲಿ ಕೈಗೊಳ್ಳಲಾಗುತ್ತಿರುವ ಬದಲಾವಣೆಗಳ ಬಗ್ಗೆಯೂ ಮಾತನಾಡಿದ ಅವರು, ಕಾರ್ಯಾಚರಣೆ ಮತ್ತು ಕಾಯ್ದಿರಿಸುವಿಕೆ ವ್ಯವಸ್ಥೆಗಳ ಜತೆಗೆ ರೈಲು ನಿರ್ಮಾಣದಲ್ಲಿ ಬಳಸುವ ವಿಧಾನಗಳನ್ನೂ ಆಧುನೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಆಧಾರ: ದಿ ಟೈಮ್ಸ್ ಆಫ್ ಇಂಡಿಯಾ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries