ನವದೆಹಲಿ (PTI): ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತ ಅಂತಿಮ ವಿಚಾರಣೆಯನ್ನು ಮೂರು ವಾರಗಳ ಬಳಿಕ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ.
ಅಪ್ರಾಪ್ತ ವಯಸ್ಕಳಲ್ಲದ ಹೆಂಡತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿದಲ್ಲಿ, ಅತ್ಯಾಚಾರ ಅಪರಾಧದ ಕಾನೂನು ಕ್ರಮಗಳಿಂದ ಪತಿಯು ವಿನಾಯಿತಿ ಪಡೆಯಬಹುದೇ ಎಂಬ ಪ್ರಶ್ನೆ ಎತ್ತಿರುವ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಈಗಿನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 (2)), 'ವೈವಾಹಿಕ ಅತ್ಯಾಚಾರ'ವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದರಿಂದ ವಿನಾಯಿತಿ ನೀಡುತ್ತದೆ. 'ಅಪ್ರಾಪ್ತ ವಯಸ್ಕಳಲ್ಲದ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಅತ್ಯಾಚಾರ ಅಲ್ಲ' ಎಂದು ಪ್ರತಿಪಾದಿಸುತ್ತದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು, ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.
'ಅರ್ಜಿಗಳ ವಿಚಾರಣೆ ದಿನಾಂಕವನ್ನು ತಿಳಿಸಲಿದ್ದೇವೆ' ಎಂದು ಸಿಜೆಐ ತಿಳಿಸಿದರು.

