HEALTH TIPS

ಎಡನೀರುಶ್ರೀಗಳ ಆರನೇ ಚಾತುರ್ಮಾಸ್ಯ ವ್ರತಾಚರಣೆ ಇಂದು ಸಮಾರೋಪ; ಸೀಮೋಲ್ಲಂಘನ, ಅಮೋಘ ಯಕ್ಷಗಾನ ಪ್ರದರ್ಶನ

ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 60 ದಿವಸಗಳ ಭಜನಾ ಸಂಕೀರ್ತನೆ, ಸಾಂಸ್ಕøತಿಕ ಸತ್ರದ ಸಮಾರೋಪ ಹಾಗೂ ಆರನೇ ಪೀಠಾರೋಹಣವಾರ್ಷಿಕೋತ್ಸವ ಸಮಾರಂಭ ಸೆ. 26ರಂದು ಶ್ರೀಮಠದಲ್ಲಿಜರುಗಲಿದೆ. ಈ ಮೂಲಕ ಎರಡುತಿಂಗಳ ಕಾಲ ಶ್ರೀಮಠದಲ್ಲಿನಡೆದುಬರುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸಂಪನ್ನಗೊಳ್ಳಲಿದೆ. 


ಬೆಳಗ್ಗೆ 6.30 ರಿಂದ 8ರ ವರೆಗೆ ಪ್ರಾತಃಕಾಲದ ಪೂಜೆ, 8.30ಕ್ಕೆ  ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ, 9.30ಕ್ಕೆ ಕಾಸರಗೋಡು ಶ್ರೀ ಪದ್ಮಶ್ರೀಯ ಮಹಿಳಾ ಭಜನಾ ಮಂಡಳಿಯಿಂದ ಭಜನೆ, 11.30ಕ್ಕೆ ಯೋಗ ನೃತ್ಯ, 11.30ಕ್ಕೆ ಗಣಪತಿಹವನ, ದಕ್ಷಿಣಾಮೂರ್ತಿ ಹವನ, ಗೋಪಾಲಕೃಷ್ಣ ಹವನ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ 1.30ಕ್ಕೆ ಮಂತ್ರಾಕ್ಷತೆ ನಡೆಯುವುದು.

ಮಧ್ಯಾಹ್ನ 2ರಿಂದ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನ ಪ್ರಾಯೋಜಿತ ಯಕ್ಷಗಾನ ಬಯಲಾಟ ನಡೆಯುವುದು. 

ಸಂಜೆ ಗಂಟೆ 7ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆವಹಿಸುವರು.ಖ್ಯಾತ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು.  ಚಾತುರ್ಮಾಸ್ಯ ಸಮತಿ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಸರ್ಕಾರದ ಮಾನವಹಕ್ಕು ಆಯೋಗ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಗೌರವ ಉಪಸ್ಥಿತರಿರುವರು. 

ಈ ಸಂದರ್ಭ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಅವರಿಗೆ ಪೀಠಾರೋಹಣ ವಾರ್ಷಿಕೋತ್ಸವ ಸನ್ಮಾನ ಸಮಾರಂಭ ನಡೆಯುವುದು. ರಾತ್ರಿ 8ರಿಂದ ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದಿಂದ 'ಚಿತ್ರಾಕ್ಷಿ ಕಲ್ಯಾಣ, ಶ್ರೀರಂಗ ತುಲಾಭಾರ ಹಾಗೂ ಗಿರಿಜಾ ಕಲ್ಯಾಣ-ಕುಮಾರ ವಿಜಯ'ಎಂಬ   ಅಮೋಘ ಯಕಷಗಾನ ಬಯಲಾಟ ಜರುಗಲಿರುವುದು. ಜರುಗಲಿದೆ. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ಗಣೇಶ್ ಕುಮಾರ್ ಹೆಬ್ರಿ(ದ್ವಂದ್ವ),  ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ರಾಮಕೃಷ್ಣ ಮಯ್ಯ ಸಿರಿಬಾಗಿಲು,  ಗಿರೀಶ್ ರೈ ಕಕ್ಕೆಪದವು, ಮಹೇಶ್ ಕನ್ಯಾಡಿ ಸಹಕರಿಸುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries