ಕಾಸರಗೋಡು: ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಿಕೊಂಡು ಬಂದಲ್ಲಿ ಮಾತ್ರ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹಿರಿಯ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ.
ಅವರು ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿಯಾನ ಅಂಗವಾಗಿ ಕನ್ನಡ ಭವನದಲ್ಲಿ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿ ನೀಡುವ ಕೈತುತ್ತಿನ ಜತೆಗೆ ಕನ್ನಡ ಭಾಷೆಯೂನಮ್ಮನ್ನು ಸೇರಿಕೊಳಳುತ್ತಿದ್ದು, ಇದು ಬದುಕಿನುದ್ದಕ್ಕೂ ನಮ್ಮ ಜತೆಗಿದ್ದು ಸಂಸ್ಕಾರ ಒದಗಿಸುತ್ತದೆ. ಕನ್ನಡ ಭಾಷೆ, ಸಂಸ್ಕøತಿಗೆಧಕ್ಕೆಯಾದಂತೆ ನೋಡಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಗಬೇಕು ಎಂದುತಿಳಿಸಿದರು.
ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ನಡೆಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕನ್ನಡ ಧ್ವಜದೊಂದಿಗೆ ಕನ್ನಡ ಪರ ಪ್ರತಿಜ್ಞೆ ಕೈಗೊಳ್ಳಲಾಯಿತು. ಅಭಿಯಾನದ ರೂವಾರಿ ಉನೈಸ್ ಪೆರಾಜೆ ಅವರಿಗೆ ಕನ್ನಡ ಭವನ ವತಿಯಿಂದ "ಕನ್ನಡ ಪಯಸ್ವಿನಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಕನ್ನಡ ಭವನ ಸಂಸ್ಥಾಪಕ ಡಾ.ವಾಮನರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಗೌರವಾರ್ಪಣೆ ನಡೆಸಿದರು. ವಿವಿಧ ವಲಯಗಳ ಸಾಧಕರಾದ ಶಿಹಾಬ್ ಗಾಳಿಮುಖ, ಈಶ್ವರ ನಾಯ್ಕ್ ಮಾಸ್ಟರ್, ವಸಂತ ಬಾರಡ್ಕ, ವಸಂತ ಕೆರೆಮನೆ, ಎಂ.ಕೆ.ಎಚ್.ಪೆರುವಾಡ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ವಾಮನರಾವ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅಖಿಲೇಶ್ ನಗುಮುಗಂ ವಂದಿಸಿದರು.



