ಕಾಸರಗೋಡು: 'ಸ್ವಚ್ಛ ಪೋಲೀಸ್ ಠಾಣೆ' ಅಭಿಯಾನದ ಅಂಗವಾಗಿ ಕಾಸರಗೋಡು ಸೈಬರ್ ಅಪರಾಧ ಪೋಲೀಸ್ ಠಾಣೆಯ ವಠಾರದಲ್ಲಿ ಚೆಂಡುಹೂವಿನ ಕೃಷಿಯನ್ನು ಕೈಗೊಳ್ಳಲಾಗಿದೆ. ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಪಿ. (ಐಪಿಎಸ್) ಅವರ ಸೂಚನೆಯ ಮೇರೆಗೆ ಕೃಷಿ ಕಾರ್ಯ ಕೈಗೊಳ್ಳಲಾಗಿದೆ.
ಮಾದಕ ದ್ರವ್ಯ ನಿಗ್ರಹ ದಳದ ಡಿವೈಎಸ್‍ಪಿ ವಿ. ಬಾಲಕೃಷ್ಣನ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿತಿನ್‍ರಾಜ್ ಚೆಂಡುಹೂವಿನ ಬೆಳೆ ಕಟಾವಿಗೆ ಚಾಲನೆ ನೀಡಿದರು.


