ಕಾಸರಗೋಡು: ರೋಟರಿ ವಿಶೇಷ ಶಾಲೆಯ ತೋಟಗಾರಿಕಾ ಥೆರಪಿ ಕಾರ್ಯಕ್ರಮದ ಅಂಗವಾಗಿ, ವೃತ್ತಿಪರ ತರಬೇತಿ ವಿಭಾಗದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬೆಳೆಸಿದ್ದ ಚೆಂಡುಹೂವಿನ ಕೃಷಿಯ ಕೊಯ್ಲು ಕಾರ್ಯ ನಡೆಯಿತು. ವಿಶೇಷ ಚೇತನ ವಿದ್ಯಾರ್ಥಿಗಳು ಬೆಳೆಸಿರುವ ಚೆಂಡುಹೂವಿನ ಬೆಳೆ ಆಕರ್ಷಕವಾಗಿ ಬೆಳೆದು ನಿಂತಿತ್ತು.
ರೋಟರಿ ಎಂ.ಬಿ.ಎಂ. ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಎಂ.ಆರ್. ನಂಬಿಯಾರ್ ಅವರು ಚೆಂಡುಹೂವಿನ ಕೊಯ್ಲಿಗೆ ಚಾಲನೆ ನೀಡಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ವಕೀಲ ಎ. ಮನೋಜ್ ಕುಮಾರ್, ಕಾರ್ಯದರ್ಶಿ ಡಾ. ರಾಜಶ್ರೀ ಸುರೇಶ್, ಜಿಲ್ಲಾ ಅಧ್ಯಕ್ಷ ಟಿ. ಮುಹಮ್ಮದ್ ಅಸ್ಲಂ, ಎಲ್ಎಲ್ಸಿ ಸಂಚಾಲಕ ಕೆ.ಎಂ. ವಿಜಯಕೃಷ್ಣನ್, ಶಾಲಾ ಉಪ ನಿರ್ದೇಶಕ ಎನ್. ಸುರೇಶ್ ಹಾಗೂ ಪ್ರಾಂಶುಪಾಲೆ ಬೀನಾಸುಕು ಉಪಸ್ಥಿತರಿದ್ದರು. ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ವಯಂ-ಹಣಕಾಸು ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


