HEALTH TIPS

ಮಾಫಿಯಾಗಳ ನಿಯಂತ್ರಣದಲ್ಲಿ ಕೇರಳದ ಐಕ್ಯರಂಗ ಸರ್ಕಾರ-ಪಿ.ಕೆ ಕೃಷ್ಣದಾಸ್ ಆರೋಪ

ಕಾಸರಗೋಡು: ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ಐಕ್ಯರಂಗ ಸರ್ಕಾರವೇ ಮಾಫಿಯಾಗಳಿಂದ ಪ್ರಾಯೋಜಿತವಾದ ಆಡಳಿತವಾಗಿ ಮಾರ್ಪಟ್ಟಿರುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ. ಅವರು ಕಾಸರಗೋಡಿನ ಚೀಮೇನಿಯಲ್ಲಿ ಆಯೋಜಿಸಲಾದ ಬಿಜೆಪಿ ಜಿಲ್ಲಾ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. 


ಪಿಣರಾಯಿ ವಿಜಯನ್ ಸರ್ಕಾರದ ಅವಧಿಯಲ್ಲಿ ನಡೆದ ಹೆಲಿಕಾಪ್ಟರ್ ವ್ಯವಹಾರದಲ್ಲಿ ಸಂಶಯದ ನೆರಳಿನಲ್ಲಿದ್ದ ಕಂಪನಿಗೇ ಮತ್ತೆ ಗುತ್ತಿಗೆ ನೀಡಲು ಸತೀಶನ್ ಸರ್ಕಾರ ಮುಂದಾಗಿರುವುದು ಉಭಯ ರಂಗಗಳ (ಎಲ್‍ಡಿಎಫ್-ಯುಡಿಎಫ್) ನಡುವಿನ ಅಪವಿತ್ರ ಮೈತ್ರಿಯನ್ನು ಸಾಬೀತುಪಡಿಸಿದೆ. 

ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿಜಯನ್ ಹಾಗೂ ಅಳಿಯ ಮುಹಮ್ಮದ್ ರಿಯಾಸ್ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸ್ಪಷ್ಟ ಹಾಗೂ ಬಲವಾದ ಸಾಕ್ಷ್ಯಾಧಾರಗಳು ಹೊರಬಂದಿದ್ದರೂ, ಎಫ್‍ಐಆರ್ ದಾಖಲಿಸದೆ ತನಿಖೆ ನಡೆಸಲು ವಿ.ಡಿ. ಸತೀಶನ್ ಮುಂದಾಗಿರುವುದು ಪಿಣರಾಯಿ ವಿಜಯನ್ ಅವರ ಭ್ರಷ್ಟಾಚಾರಕ್ಕೆ ಯುಡಿಎಫ್ ಬೆಂಬಲ ನೀಡುತ್ತಿರುವುದರ ಸಂಕೇತವಾಗಿದೆ ಎಂದು ಕೃಷ್ಣದಾಸ್ ಹೇಳಿದರು.

ಕಾಂತಾಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆಯನ್ನು ಕೇವಲ ಮಹಿಳಾ ವಿರೋಧಿ ಹೇಳಿಕೆಯಾಗಿ ಮಾತ್ರ ಪರಿಗಣಿಸದೆ, ಅದು ಮಾತೃರಾಷ್ಟ್ರ ವಿರೋಧಿ ನಿಲುವಾಗಿದೆ. ಆದರೆ ಇದರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಲು ಸಿಪಿಎಂ ಮತ್ತು ಕಾಂಗ್ರೆಸ್ ಮುಂದಾಗದಿರುವುದು ವಿಷಾದನೀಯ  ಎಂದು ತಿಳಿಸಿದರು.

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ, ಪಿ.ಕೆ. ವೇಲಾಯುಧನ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್, ಕಣ್ಣೂರು ವಲಯ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಪ್ರಮೀಳಾ ಸಿ. ನಾಯ್ಕ್, ಎ. ವೇಲಾಯುಧನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ಕಣ್ಣೂರು ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ, ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್. ಯಶೋದಾ, ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸುತ್ತಿರುವ ಶಿಬಿರ ಸೆ. 27ರಂದು ಸಮಾರೋಪಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries