ಚೆನ್ನೈ: ತಮಿಳು ಭಾಷೆಯನ್ನು ಮದ್ರಾಸ್ ಹೈಕೋರ್ಟ್‌ನ ಪ್ರಧಾನ ಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಡಿಸಿದ ನಿರ್ಣಯವನ್ನು ಗುರುವಾರ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಈ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್, ಈ ನಿರ್ಣಯ ಯಾವುದೇ ಭಾಷೆಯ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
ಸರಕಾರದ ಈ ನಿರ್ಣಯಕ್ಕೆ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಸರ್ವಾನುಮತದ ಬೆಂಬಲ ಸೂಚಿಸಿದವು.
ಈ ಸಂಬಂಧ ತಮ್ಮ ತಮ್ಮ ನಾಯಕರು ಮಾಡಿರುವ ಆಗ್ರಹಗಳು ಹಾಗೂ ತೆಗೆದುಕೊಂಡಿರುವ ಉಪಕ್ರಮಗಳ ಇತಿಹಾಸವನ್ನು ಶಾಸಕರು ಸ್ಮರಿಸಿದರು.
ಬಳಿಕ, ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ.ಪ್ರಭಾಕರ್ ಘೋಷಿಸಿದರು.

