ಕುಂಬಳೆ: ಅನಧಿಕೃತ ಮರಳು ಸಂಗ್ರಹ ವಿರುದ್ಧ ಪೊಲೀಸ್ ಕಾರ್ಯಾಚರಣೆ ಸಂದರ್ಭ ಅರಿಕ್ಕಾಡಿ ಹೊಳೆಯಲ್ಲಿ ನಾಪತ್ತೆಯಾಗಿದ್ದ ಅರಿಕ್ಕಾಡಿ ಕಡವತ್ ಕುನ್ನಿಲ್ ನಿವಾಸಿ ಅಬ್ದುಲ್ ಖಾದರ್-ಸೈನಬ ದಂಪತಿ ಪುತ್ರ ಇಬ್ರಾಹಿಂ (35) ಅವರ ಮೃತದೇಹ ಗುರುವಾರ ಪತ್ತೆಯಾಗಿದೆ. ಕರ್ನಾಟಕದ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೇತೃತ್ವದಲ್ಲಿ ನಡೆದ ಹುಡುಕಾಟದ ಕಾರ್ಯಾಚರಣೆಯಲ್ಲಿ ಶಿರಿಯ ಅಳಿವೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಸೋಮವಾರ ರಾತ್ರಿ ಅನಧಿಕೃತ ಮರಳು ಸಾಗಾಟದ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಕರಾವಳಿ ಪೆÇಲೀಸರನ್ನು ಕಂಡು ದೋಣಿಯಲ್ಲಿದ್ದ ಮೂವರು ಕಾರ್ಮಿಕರು ದೋಣಿಯನ್ನು ಬಿಟ್ಟು ಹೊಳೆಗೆ ಹಾರಿದ್ದರು. ಇವರಲ್ಲಿ ಇಬ್ಬರು ಈಜಿ ದಡ ಸೇರಿದ್ದರೆ, ಇಬ್ರಾಹಿಂ ನಾಪತ್ತೆಯಾಗಿದ್ದರು. ಸ್ಥಳೀಯ ಪೊಲೀಸ್, ಕರಾವಳಿ ಪೊಲೀಸ್ ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಇವರ ಪತತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ನೇತೃಥ್ವದ ತಂಡದ ಸಹಾಯ ಯಾಚಿಸಲಾಗಿತ್ತು. ಇಬ್ರಾಹಿಂ ಅವಿವಾಹಿತರಾಗಿದ್ದರು.


