ಕಾಸರಗೋಡು: ಮರದಿಂದ ಬಿದ್ದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಕುತ್ತಿಕ್ಕೋಲು ಕರಿವೆಡಗಂ 13ನೇ ವಾರ್ಡ್ ನರಿಯನ್ನಪುನ್ನಿಯ ನಿವಾಸಿ, ಕಾಂಗ್ರೆಸ್‍ನ ಸಕ್ರಿಯ ಕಾರ್ಯಕರ್ತ ಎಂ.ನಾರಾಯಣ್ (48) ಮೃತಪಟ್ಟವರು. ಭಾನುವಾರ ಘಟನೆ. ಮನೆ ಸನಿಹದ ಮರದಿಂದ ಬಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನಾರಾಯಣನ್ ಕೂಲಿ ಕಾರ್ಮಿಕರಾಗಿದ್ದರು.


