HEALTH TIPS

ಅಳಿವಿನಂಚಿನಲ್ಲಿದ್ದ ಪಿಗ್ಮಿ ಹಾಗ್ ತಳಿ ಸಂವರ್ಧನೆ: ಇವುಗಳ ಸಂಖ್ಯೆಯಲ್ಲಿ ಹೆಚ್ಚಳ

ಗುವಾಹಟಿ:  ಪ್ರಪಂಚದ ಅತ್ಯಂತ ಸಣ್ಣ ಹಾಗೂ ಅಪರೂಪದ ಕಾಡು ಹಂದಿ ತಳಿಯಾದ 'ಪಿಗ್ಮಿ ಹಾಗ್' (Pygmy Hog) ಸಂತತಿಯನ್ನು ರಕ್ಷಣೆ ಮಾಡುವುದರ ಜೊತೆಗೆ ತಳಿ ಸಂವರ್ಧನೆ ಮಾಡಲಾಗಿದೆ.


ಕಾಡು ಹಂದಿ ಪ್ರಭೇದವಾದ ಪಿಗ್ಮಿ ಹಾಗ್‌ನ ಸಂಖ್ಯೆಯು 6ರಿಂದ 194ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂನ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಜಯಂತ ಮಲ್ಲಾ ಬರುವಾ ಭಾನುವಾರ ತಿಳಿಸಿದರು.

ಭಾರತದಲ್ಲಿ ಮಾತ್ರ ಕಂಡುಬರುವ, ಅಳಿವಿನಂಚಿನಲ್ಲಿರುವ ಈ ವಿಶಿಷ್ಟ ಪ್ರಾಣಿಗಳ ಸಂಖ್ಯೆ ಎಷ್ಟು ವರ್ಷಗಳ ಅವಧಿಯಲ್ಲಿ ಹೆಚ್ಚಾಗಿದೆ ಎಂಬುದನ್ನು ಸಚಿವರಾಗಲಿ, ಸರ್ಕಾರವಾಗಲಿ ಸ್ಪಷ್ಟಪಡಿಸಿಲ್ಲ. ಆದರೆ, 2040ರ ವೇಳೆಗೆ ಇವುಗಳ ಸಂಖ್ಯೆಯನ್ನು 300ಕ್ಕೇರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಗುರಿಯು ಕೇವಲ ಒಂದು ಜೀವಿಯ ಸಂರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಪಿಗ್ಮಿ ಹಾಗ್ ಸೇರಿದಂತೆ ಅಪಾಯದಲ್ಲಿರುವ ಇತರೆ ವನ್ಯಜೀವಿಗಳು ನೆಚ್ಚಿಕೊಂಡಿರುವ ಹುಲ್ಲುಗಾವಲು, ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

ಹುಲ್ಲುಗಾವಲುಗಳ ರಕ್ಷಣೆಯಿಂದ ಹಿಡಿದು ತಳಿ ಸಂವರ್ಧನೆಯನ್ನು ಬಲಪಡಿಸುವವರೆಗೆ ಅಸ್ಸಾಂನ ಅಪರೂಪದ ವನ್ಯಜೀವಿ ಪರಂಪರೆಯನ್ನು ಉಳಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ ಪಿಗ್ಮಿ ಹಾಗ್‌ಗಳ ಸಂರಕ್ಷಣೆ ಹಾಗೂ ತಳಿ ಸಂವರ್ಧನೆಯನ್ನು ಪ್ರಾರಂಭಿಸಲಾಯಿತು. ಅವುಗಳ ಸಂಖ್ಯೆಯಲ್ಲಿನ ಚೇತರಿಕೆಯು ಸಂರಕ್ಷಣೆ, ತಾಳ್ಮೆ ಹಾಗೂ ದಶಕಗಳ ಪ್ರಯತ್ನದ ಕಥೆಯಾಗಿದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries