HEALTH TIPS

ನನ್ನನ್ನು ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ: ಸೋನಂ ವಾಂಗ್ಚುಕ್ ಆತಂಕ

ನವದೆಹಲಿ:  ನಾನು ಸರಕಾರದ ವಿರುದ್ಧ ಮಾತನಾಡುತ್ತಿರುವುದರಿಂದ, ನನ್ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯುವ ಸಾಧ್ಯತೆ ಇದೆ ಎಂದು ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ, ಕಳೆದ ವರ್ಷದ ಸೆಪ್ಟೆಂಬರ್ 24ರಂದು ಲಡಾಖ್ ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.


ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ಸಂಭವಿಸಿದ್ದ ಹಿಂಸಾಚಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ಲಡಾಖ್ ಹಿಂಸಾಚಾರದ ಕುರಿತ ನ್ಯಾಯಾಂಗ ತನಿಖೆಯ ವರದಿಯನ್ನು ಬಹಿರಂಗಗೊಳಿಸಬೇಕು. ಒಂದು ವೇಳೆ ವರದಿಯನ್ನು ಬಹಿರಂಗಗೊಳಿಸದಿದ್ದರೆ, ಪೊಲೀಸ್ ಗೋಲಿಬಾರ್ ಕುರಿತು ಪರಿಶೀಲನೆ ನಡೆಸಲು ಸ್ವತಂತ್ರ ಜನತಾ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು" ಎಂದು ಅವರು ಘೋಷಿಸಿದರು.

ನನಗೆ ಜೀವ ಬೆದರಿಕೆ ಇದೆ ಎಂಬ ಎಚ್ಚರಿಕೆಗಳು ಬರುತ್ತಿವೆ ಹಾಗೂ ನಾನು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧನಿದ್ದೇನೆ ಎಂದು ಅವರು ಘೋಷಿಸಿದರು. "ಅವರು ನನ್ನನ್ನು ಜೈಲಿನಲ್ಲಿರಿಸಿದರು. ನನ್ನನ್ನು ಎಲ್ಲಾದರೂ ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯುವ ಸಾಧ್ಯತೆಯೂ ಇದೆ. ನಿಮ್ಮನ್ನು ಎನ್ ಕೌಂಟರ್ ಮಾಡಬಹುದು ಎಂದು ಜನರು ಹೇಳುತ್ತಿದ್ದಾರೆ. ಅದು ಆಗುವುದಿದ್ದರೆ ಆಗಲಿ, ಆಗಲಾದರೂ ದೇಶ ಎಚ್ಚೆತ್ತುಕೊಳ್ಳುತ್ತದೆ" ಎಂದು ಅವರು ಹೇಳಿದರು.

ಕಳೆದ ವರ್ಷ ನಡೆದ ಹೋರಾಟದ ವೇಳೆ ಸಂಭವಿಸಿದ ಸಾವುಗಳಿಗೆ ಅಮಿತ್ ಶಾ ಹೊಣೆ ಎಂದು ಆರೋಪಿಸಿದ ಸೋನಂ ವಾಂಗ್ಚುಕ್, "ಅಮಿತ್ ಶಾ ರಾಜೀನಾಮೆ ಸಲ್ಲಿಸಬೇಕು ಎಂದು ನಾನು ಲಡಾಖ್ ನಿಂದ ಹೇಳುತ್ತಿದ್ದೇನೆ. ಲಡಾಖ್ ನಲ್ಲಿ ಏನು ನಡೆಯಿತು ಅದರ ನೈತಿಕ ಹೊಣೆಯನ್ನು ಅವರು ಹೊರಬೇಕು" ಎಂದು ಹೇಳಿದರು.

"ಸ್ಥಳೀಯ ಯುವಕರ ವಿರುದ್ಧ ಭದ್ರತಾ ಸಿಬ್ಬಂದಿಗಳು ಎಕ್ 47 ರೈಫಲ್ ಗಳು ಸೇರಿದಂತೆ ಸ್ವಯಂಚಾಲಿತ ಆಯುಧಗಳನ್ನು ಬಳಸುತ್ತಿದ್ದು, ಬಳಿಕ ಅವರನ್ನು ದೇಶದ್ರೋಹಿಗಳು ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ" ಎಂದೂ ಅವರು ದೂರಿದರು.

ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಕಾರ್ಯಾಚರಣೆಯ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿರುವುದನ್ನು ಸ್ವಾಗತಿಸಿದ ಸೋನಂ ವಾಂಗ್ಚುಕ್, "ನಾನು ಆ ಕರೆಯನ್ನು ಬೆಂಬಲಿಸುತ್ತೇನೆ. ಆದರೆ, ರಾಹುಲ್ ಗಾಂಧಿ ಲಡಾಖ್ ಕುರಿತು ಮೌನ ವಹಿಸಿರುವುದೇಕೆ?" ಎಂದು ಪ್ರಶ್ನಿಸಿದರು.

"ವಿದ್ಯಾರ್ಥಿಗಳ ವಿರುದ್ಧ ಅಂತಹ ಆಯುಧಗಳನ್ನು ಹೇಗೆ ಬಳಸಬಹುದು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ, ಲಡಾಖ್ ನಲ್ಲಿ ನಡೆದಿದ್ದೇನೆ? ಲಡಾಖ್ ನಲ್ಲಿ ಎಕೆ 47 ರೈಫಲ್ ಗಳನ್ನು ಬಳಸಲಾಯಿತು ಹಾಗೂ ಜನರ ತಲೆ ಹಾಗೂ ಎದೆಗಳಿಗೆ ಗುಂಡುಗಳು ತಾಗಿದವು" ಎಂದೂ ಅವರು ಹೇಳಿದರು.








 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries