HEALTH TIPS

Sikkim | ಭಾರಿ ಮಳೆಗೆ ಭೂಕುಸಿತ: ಹಲವು ಮನೆಗಳಿಗೆ ಹಾನಿ

ಗ್ಯಾಲ್ಶಿಂಗ್ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಹಲವಾರು ಮನೆಗಳು ಹಾನಿಗೀಡಾಗಿರುವ ಘಟನೆ ಗುರುವಾರ ತಡರಾತ್ರಿ ಸಿಕ್ಕಿಂನ ಗ್ಯಾಲ್ಶಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ನಡೆದಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. 


ಭೂಕುಸಿತದಿಂದಾಗಿ ಹಲವಾರು ಮನೆಗಳು ಹಾಗೂ ಸರಕಾರಿ ವಾಸ್ತವ್ಯಗಳು ನಾಶವಾಗಿವೆ ಇಲ್ಲವೆ ಭಾರಿ ಪ್ರಮಾಣದ ಹಾನಿಗೀಡಾಗಿವೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್, ಭೂಕುಸಿತದಿಂದ ತೊಂದರೆಗೀಡಾಗಿರುವ ಸ್ಥಳೀಯ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮವೇ ಸರಕಾರದ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.

ಭಾರಿ ಎಚ್ಚರಿಕೆಯಿಂದಿರಬೇಕು, ಪರಿಸ್ಥಿತಿಯನ್ನು ಅತ್ಯಂತ ನಿಕಟವಾಗಿ ಅವಲೋಕಿಸಬೇಕು ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ತೊಂದರೆಗೀಡಾಗಿರುವ ಪ್ರದೇಶದ ಜನಗಳು ಎಚ್ಚರಿಕೆಯಿಂದಿರಬೇಕು, ಅಧಿಕಾರಿಗಳು ನೀಡುವ ಸಲಹಾಸೂಚಿಗಳನ್ನು ಪಾಲಿಸಬೇಕು ಹಾಗೂ ಒಬ್ಬರಿಗೊಬ್ಬರು ನೆರವಿನ ಹಸ್ತ ಚಾಚಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳನ್ನು ರಕ್ಷಿಸಲು ಹಾಗೂ ರಿಂಬಿಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ಭರವಸೆ ನೀಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries