ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಐಸಿಡಿಎಸ್ ಘಟಕವು ಆಯೋಜಿಸಿರುವ 'ರಾಷ್ಟ್ರೀಯ ಪೋಷಣ್ ಮಾಹ್-2026' ಪೌಷ್ಟಿಕಾಂಶ ಮಾಸಾಚರಣೆಯನ್ನು ಜಿಲ್ಲೆಯಲ್ಲಿ ವ್ಯಾಪಕ ಕಾರ್ಯಕ್ರಮಗಳೊಂದಿಗೆ ಆರಂಭಿಸಲಾಯಿತು.
ಈ ಸಂದರ್ಭ 'ಪೆÇೀಷಣ್ ಅಭಿಯಾನ' ಯೋಜನೆಯ ಅಂಗವಾಗಿ ಸಿದ್ಧಪಡಿಸಲಾದ ಅಭಿಯಾನದ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಬಿಡುಗಡೆಗೊಳಿಸಿ, ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಐಸಿಡಿಎಸ್ ಕೋಶದ ಕಾರ್ಯಕ್ರಮ ಅಧಿಕಾರಿ ಜೆಮ್ಲಾ ರಾಣಿ ಎ.ಕೆ., ಹಿರಿಯ ಅಧೀಕ್ಷಕಿ (ಡಿಪಿಒ) ಶೈಲಶ್ರೀ ಎ.ಟಿ., ಪೆÇೀಷಣ್ ಅಭಿಯಾನದ ಜಿಲ್ಲಾ ಸಂಯೋಜಕ ವಿಪಿನ್ ಪವಿತ್ರನ್ ಹಾಗೂ 12 ಐಸಿಡಿಎಸ್ ಯೋಜನೆಗಳ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


