ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ 'ಪ್ರಿಯದರ್ಶಿನಿ' ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದ ಪರಿಣಾಮ ನಷ್ಟದಲ್ಲಿ ಮುಗ್ಗರಿಸಿದ ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸುವ ದೃಷ್ಟಿಯಲ್ಲಿ ಖಾಸಗಿ ಬಸ್ ಗಳನ್ನು ಕೆಎಸ್ಸಾರ್ಟಿಸಿ ಗಾಗಿ ಬಾಡಿಗೆ ಆಧಾರದಲ್ಲಿ ಗುತ್ತಿಗೆಗೆ ಖರೀದಿಸುವ ಪ್ರಸ್ತಾಪಕ್ಕೆ ಬಸ್ ಮಾಲಕರ ಸಂಘಟನೆ ಸಮ್ಮತಿ ಸೂಚಿಸಿದೆ.
ಈ ಸಂಬಂಧ ಖಾಸಗಿ ಬಸ್‍ಗಳನ್ನು ಬಾಡಿಗೆಗೆ ಪಡೆದು ಕೆಎಸ್ಸಾರ್ಟಿಸಿ ಹೆಸರಿನಲ್ಲಿ ಸರ್ವೀಸ್ ನಡೆಸಬೇಕೆಂದು ಆಗ್ರಹಿಸಿ ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ರಾಜ್ಯ ಸರ್ಕರವನ್ನು ಪತ್ರದ ಮೂಲಕ ವಿನಂತಿಸಿದೆ. 'ಪ್ರಿಯದರ್ಶಿನಿ' ಯೋಜನೆಯಿಂದ ನಷ್ಟದ ಕೂಪದಲ್ಲಿ ಮುಗ್ಗರಿಸಿದ ಖಾಸಗಿ ಬಸ್‍ಗಳನ್ನು ಸರ್ಕಾರ ವಹಿಸಿಕೊಂಡು ಮುನ್ನಡೆಸಬೇಕೆಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ.

