HEALTH TIPS

AGMUT ಅಧಿಕಾರಿಗಳ ವಿರುದ್ಧದ FIR, ಬಂಧನಗಳ ಕುರಿತು 48 ಗಂಟೆಗಳಲ್ಲಿ ವರದಿ ಸಲ್ಲಿಸಲು ಕೇಂದ್ರದ ಸೂಚನೆ

ನವದೆಹಲಿ: ಐಎಎಸ್, ಐಪಿಎಸ್, ಡಿಎಎನ್‌ಐಸಿಎಸ್ (ದಿಲ್ಲಿ,ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ದಿಯು ಮತ್ತು ನಗರ ಹವೇಲಿ ಸಿವಿಲ್ ಸೇವೆಗಳು) ಹಾಗೂ ಡಿಎಎನ್‌ಐಪಿಎಸ್ (ಪೋಲಿಸ್) ಅಧಿಕಾರಿಗಳ ವಿರುದ್ಧ ಯಾವುದೇ ಎಫ್‌ಐಆರ್, ಬಂಧನ, ಪ್ರತಿಕೂಲ ನ್ಯಾಯಾಲಯ ಆದೇಶ ಅಥವಾ ತನಿಖಾ ಸಂಸ್ಥೆಗಳ ಕ್ರಮದ ಕುರಿತು 48 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ AGMUT (ಅರುಣಾಚಲ ಪ್ರದೇಶ, ಗೋವಾ, ಮಿರೆರಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳು) ಕೇಡರ್ ವರ್ಗಗಳಿಗೆ ಕೇಂದ್ರ ಸರಕಾರವು ನಿರ್ದೇಶನ ನೀಡಿದೆ.


ಕೇಂದ್ರ ಗೃಹ ಸಚಿವಾಲಯದ ಪುನರ್‌ಪರಿಶೀಲನಾ ಸಭೆಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ. ವಿವಿಧ ಇಲಾಖೆಗಳು ಸಿಬಿಐ, ಈ.ಡಿ. ಮತ್ತು ಎಸಿಬಿಯಂತಹ ತನಿಖಾ ಸಂಸ್ಥೆಗಳ ಕ್ರಮಗಳ ಬಗ್ಗೆ ತಕ್ಷಣವೇ ವರದಿ ಮಾಡದಿರುವುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಬಾಕಿ ಇರುವ ಶಿಸ್ತು ಕ್ರಮದ ಪ್ರಕರಣಗಳ ವಿವರಗಳು ಮತ್ತು ದಾಖಲೆಗಳನ್ನು ಅಕ್ಟೋಬರ್ 15ರೊಳಗೆ ಸಲ್ಲಿಸಲು ತಿಳಿಸಲಾಗಿದೆ. ಪ್ರಕರಣಗಳು ದೋಷಾರೋಪ ಪಟ್ಟಿಯ ಪೂರ್ವ ಅಥವಾ ನಂತರದ ಹಂತಗಳಲ್ಲಿವೆಯೇ ಎನ್ನುವುದನ್ನು ನಿರ್ದಿಷ್ಟ ಪಡಿಸುವಂತೆಯೂ ಸೂಚಿಸಲಾಗಿದೆ.

ಅನಧಿಕೃತವಾಗಿ ದೀರ್ಘಾವಧಿ ರಜೆಯಲ್ಲಿರುವ ಅಧಿಕಾರಿಗಳ ಬಗ್ಗೆಯೂ ಕಟ್ಟುನಿಟ್ಟಿನ ಪರಿಶೀಲನೆಗೆ ಸೂಚಿಸಲಾಗಿದೆ. ರಜೆಯ ಸ್ವರೂಪ, ಅವಧಿ, ವಿಸ್ತರಣೆ ಮತ್ತು ಅಧಿಕಾರಿ ತಂಗಿರುವ ಸ್ಥಳವನ್ನು ಪರಿಶೀಲಿಸಬೇಕು. ಕೇವಲ ಮಂಜೂರಾದ ರಜೆಗಳಿಗೆ ಮಾತ್ರ ವೇತನ ನೀಡಬೇಕು ಮತ್ತು ಹೆಚ್ಚುವರಿ ಪಾವತಿಯಾಗಿದ್ದರೆ ಅದನ್ನು ನಿಯಮಾವಳಿಗಳ ಪ್ರಕಾರ ವಸೂಲಿ ಮಾಡಬೇಕು. ಲಡಾಖ್, ಪುದುಚೇರಿ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಅರುಣಾಚಲ ಪ್ರದೇಶಗಳಿಗೆ ಈ ಬಗ್ಗೆ ವಿಶೇಷ ನಿರ್ದೇಶನ ನೀಡಲಾಗಿದೆ. ಕಾರಣವಿಲ್ಲದೆ ದೀರ್ಘಕಾಲ ಗೈರುಹಾಜರಾದವರ ವಿರುದ್ಧ ಶಿಸ್ತು ಕ್ರಮ ಜರುಗಲಿದೆ.

ಅಧಿಕಾರಿಗಳಿಗೆ ಕಡ್ಡಾಯ ತರಬೇತಿಯಿಂದ ವಿನಾಯಿತಿಯನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ನೀಡಲಾಗುವುದು. ಬಡ್ತಿಗೆ ಹತ್ತಿರವಿರುವ ಅಧಿಕಾರಿಗಳನ್ನು ಆದ್ಯತೆಯ ಮೇಲೆ ತರಬೇತಿಗೆ ಬಿಡುಗಡೆ ಮಾಡಬೇಕು.

ಅಲ್ಲದೆ, ರಾಜ್ಯ ಪೊಲೀಸ್ ಸೇವಾ ಅಧಿಕಾರಿಗಳನ್ನು ಐಪಿಎಸ್ ದರ್ಜೆಗೆ ಸೇರ್ಪಡೆಗೊಳಿಸುವ ಪ್ರಸ್ತಾವಗಳನ್ನು ಯುಪಿಎಸ್ಸಿಗೆ ಶೀಘ್ರವಾಗಿ ಕಳುಹಿಸುವಂತೆ ಸಭೆಯಲ್ಲಿ ಅರುಣಾಚಲ ಪ್ರದೇಶಕ್ಕೆ ತಿಳಿಸಲಾಗಿದೆ.

ಐಎಎಸ್ ಮತ್ತು ಐಪಿಎಸ್ ಸೇರ್ಪಡೆಗಾಗಿ ವಾರ್ಷಿಕ ಕಾರ್ಯಕ್ಷಮತೆ ವರದಿಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಜಮ್ಮು ಮತ್ತು ಕಾಶ್ಮೀರಕ್ಕೆ ಸೂಚಿಸಲಾಗಿದೆ. ನೇರ ನೇಮಕಾತಿ ಬಾಕಿಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಗೃಹ ಸಚಿವಾಲಯ ಆದೇಶಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries