ಕಾಸರಗೋಡು: ಗಾಂಧಿ ಜಯಂತಿ ವಾರಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಾರ್ತಾ ಕಚೇರಿ ವತಿಯಿಂದ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ ಆಯೋಜಿಸಲಾಗಿದೆ.
ಅಕ್ಟೋಬರ್ 8ರಂದು ಕಾಸರಗೋಡು ಸಿವಿಲ್ ಸ್ಟೇಷನ್‌ನ ಜಿಲ್ಲಾ ವಾರ್ತಾ ಕಚೇರಿಯಲ್ಲಿ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಹೈಸ್ಕೂಲ್ ವಿಭಾಗದ ಹಾಗೂ ಮಧ್ಯಾಹ್ನ 2ಕ್ಕೆ ಕಾಲೇಜು ವಿಭಾಗದ ಸ್ಪರ್ಧೆ ನಡೆಯಲಿದೆ.ಒಂದು ಶಿಕ್ಷಣ ಸಂಸ್ಥೆಯಿಂದ ಗರಿಷ್ಠ ಇಬ್ಬರು ಸದಸ್ಯರನ್ನೊಳಗೊಂಡ ಎರಡು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಭಾಗವಹಿಸಲು prdcontest@gmail.com ಇ-ಮೇಲ್ ಮೂಲಕ ನೋಂದಣಿ ಮಾಡಬೇಕು. ಹೆಸರು, ಶಿಕ್ಷಣ ಸಂಸ್ಥೆಯ ಹೆಸರು, ಸ್ಪರ್ಧಾ ವಿಭಾಗ, ದೂರವಾಣಿ ಸಂಖ್ಯೆ ಹಾಗೂ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ನೋಂದಣಿ ಮಾಡಬೇಕು. ದೂರವಾಣಿ ಸಂಖ್ಯೆ: 04994 255145

