HEALTH TIPS

ವೈಯಕ್ತಿಕ ಕಾರಣ ಹೇಳಿ ದಿಢೀರ್ ರಾಜೀನಾಮೆ ನೀಡಿದ ಇರಾನ್ ಇಂಧನ ಸಚಿವ

ದುಬೈ: ಇರಾನ್‌ನ ಇಂಧನ ಸಚಿವ ಮೊಹ್ಸೆನ್ ಪಾಕ್ನೆಜಾದ್ ಅವರು ವೈಯಕ್ತಿಕ ಕಾರಣ ಉಲ್ಲೇಖಿಸಿ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.


ಸರ್ಕಾರಿ ಸ್ವಾಮ್ಯದ 'ನ್ಯಾಷನಲ್ ಇರಾನಿಯನ್ ಆಯಿಲ್ ಕಂಪನಿ'ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಮೀದ್ ಬೋವಾರ್ಡ್ ಅವರು ಹಂಗಾಮಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. 

ಒಪೆಕ್ ಸದಸ್ಯ ರಾಷ್ಟ್ರವಾಗಿರುವ ಇರಾನ್‌ನ ಇಂಧನ ಸಚಿವರಾಗಿ ಮೊಹ್ಸೆನ್ ಪಾಕ್ನೆಜಾದ್ ಅವರು 2024ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ್ದರು.

ಇರಾನ್ ಮತ್ತು ಅಮೆರಿಕ ನಡುವಿನ ಏಳು ತಿಂಗಳ ಸುದೀರ್ಘ ಸಂಘರ್ಷವು ದೇಶದ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದೂ ಮೂಲಗಳು ಉಲ್ಲೇಖಿಸಿವೆ.

'ಪಾಕ್ನೆಜಾದ್ ಅವರು ಬಹಳ ಹಿಂದೆಯೇ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು. ಹಾಗಾಗಿ ಮನವಿ ಮೇರೆಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕ್ನೆಜಾದ್ ರಾಜೀನಾಮೆ ಅಂಗೀಕಾರಗೊಂಡ ಬಳಿಕ ಹಮೀದ್ ಬೋವಾರ್ಡ್ ಅವರನ್ನು ಹಂಗಾಮಿ ಇಂಧನ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ರಾಜೀನಾಮೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪಾಕ್ನೆಜಾದ್, 'ನಾವು ಮಾರಾಟ ಮಾಡಿದ ತೈಲದ ಆದಾಯವು ಇಂದಿಗೂ ಬರುತ್ತಿದೆ. ದೇವರ ದಯೆಯಿಂದ ಅದು ಮುಂದುವರಿಯಲಿದೆ' ಎಂದು ಹೇಳಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries