HEALTH TIPS

'Evil Dead'- ಪಾಟೇಕರ್ ನಿಧನದ ಬೆನ್ನಲ್ಲೇ ನಟಿ ತನುಶ್ರೀ ಕಮೆಂಟ್: ವ್ಯಾಪಕ ಆಕ್ರೋಶ

ಮುಂಬೈ: ಹಿರಿಯ ನಟ ನಾನಾ ಪಾಟೇಕರ್‌ ಅವರ ನಿಧನದ ಬೆನ್ನಲ್ಲೇ, ನಟಿ ತನುಶ್ರೀ ದತ್ತಾ ನೀಡಿರುವ 'eviಟ ಜeಚಿಜ' ಹೇಳಿಕೆ ಚಿತ್ರರಂಗದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. ನಟನ ಅಗಲಿಕೆಗೆ ಇಡೀ ದೇಶವೇ ಶೋಕಿಸುತ್ತಿರುವಾಗ ನಟಿಯ ಈ ರೀತಿಯ ಹೇಳಿಕೆ ಅಸಂವೇದನಾಶೀಲ ಹಾಗೂ ನಾಚಿಕೆಗೇಡು ಎಂದು ಅಖಿಲ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟ (ಎಐಸಿಡಬ್ಲ್ಯೂಎ) ಕಿಡಿಕಾರಿದೆ.  


2008ರ ಅಕ್ಟೋಬರ್‌ನಲ್ಲಿ 'ಹಾರ್ನ್‌ ಒಕೆ ಪ್ಲೀಸ್‌' ಚಿತ್ರದ ಐಟಂ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಆದರೆ, ನಂತರ ಆ ಚಿತ್ರದಿಂದ ಅವರನ್ನು ತೆಗೆದುಹಾಕಿ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿತ್ತು.

ತನುಶ್ರೀ ಹೇಳಿದ್ದೇನು?:

'ನಾನಿಂದು ಲಖನೌದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದು, ಇಡೀ ದಿನದ ವೇಳಾಪಟ್ಟಿ ಸಿದ್ಧವಾಗಿದೆ. ನಾನು ಅಲ್ಲಿನ ಲೈವ್‌ ಹಾಗೂ ಕಂಟೆಂಟ್ ಪೋಸ್ಟ್ ಮಾಡಲು ಯೋಜಿಸಿದ್ದೆ. ಆದರೆ ಮಾಧ್ಯಮಗಳೆಲ್ಲವೂ ಈ ದುಷ್ಟಶಕ್ತಿ ಸಾವಿನ (evil dead) ವಿಷಯದಲ್ಲೇ ಆಸಕ್ತಿ ವಹಿಸುತ್ತವೆ ಎಂಬ ಚಿಂತೆ ನನಗಿದೆ. ಹಾಗಾಗಿ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಯೋಚಿಸಿ ನಂತರವೇ ಹೇಳಿಕೆ ನೀಡುತ್ತೇನೆ. ಅವರ ಕುಟುಂಬಕ್ಕೆ ಸಂತಾಪಗಳು' ಎಂದಿದ್ದರು.

ಎಐಸಿಡಬ್ಲ್ಯೂಎನಿಂದ ತೀವ್ರ ಆಕ್ರೋಶ

ತನುಶ್ರೀ ದತ್ತಾ ಅವರ ಈ ಹೇಳಿಕೆಯನ್ನು 'ಅಖಿಲ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟ' ತೀವ್ರವಾಗಿ ಖಂಡಿಸಿದೆ.

ಒಕ್ಕೂಟದ ಅಧ್ಯಕ್ಷ ಸುರೇಶ್ ಶ್ಯಾಮ್‌ಲಾಲ್ ಗುಪ್ತಾ ಮಾತನಾಡಿ, 'ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಸೇವೆ ಸಲ್ಲಿಸಿದ ಧೀರ ಹಾಗೂ 'ನಾಮ್ ಫೌಂಡೇಶನ್' ಮೂಲಕ ಕಷ್ಟದಲ್ಲಿದ್ದ ರೈತರ ಕುಟುಂಬಗಳಿಗೆ ನೆರವಾದ ಶ್ರೇಷ್ಠ ಕಲಾವಿದ, ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್‌ ಅವರ ಅಗಲಿಕೆಗೆ ಇಡೀ ಚಿತ್ರರಂಗ ಹಾಗೂ ದೇಶವೇ ಕಂಬನಿ ಮಿಡಿಯುತ್ತಿದೆ. ನಾವು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಮತ್ತು ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ' ಎಂದಿದ್ದಾರೆ.

ಮುಂದುವರಿದು, 'ಇಂತಹ ದುಃಖದ ಸಂದರ್ಭದಲ್ಲಿ ತನುಶ್ರೀ ದತ್ತಾ ಸಾಮಾಜಿಕ ಜಾಲತಾಣಗಳಲ್ಲಿ 'evil dead' ಎಂಬ ಪದ ಬಳಸಿರುವುದು ತೀವ್ರ ಆಕ್ಷೇಪಾರ್ಹ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ಎಐಸಿಡಬ್ಲ್ಯೂಎ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಒಬ್ಬ ವ್ಯಕ್ತಿಯ ಸಾವಿನ ನಂತರ ಇಂತಹ ಪದಗಳನ್ನು ಬಳಸುವುದು ಮಾನವೀಯತೆಗೆ ವಿರುದ್ಧವಾದದ್ದು. ಇಲ್ಲಿಯವರೆಗೆ ನಮ್ಮ ಚಿತ್ರರಂಗದಲ್ಲಿ ಯಾರೂ ಯಾರೊಬ್ಬರ ನಿಧನದ ನಂತರ ಇಂತಹ ಹೇಳಿಕೆಯನ್ನು ನೀಡಿರಲಿಲ್ಲ. ನೀವೇ ಮೊದಲನೆಯವರು ಮತ್ತು ನೀವೇ ಕೊನೆಯವರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಇಂತಹ ಸಂದರ್ಭದಲ್ಲಿ ಏನು ಮಾತನಾಡಬೇಕು ಮತ್ತು ಯಾವಾಗ ಮೌನವಾಗಿರಬೇಕು ಎಂಬುದು ಈ ಉದ್ಯಮದ ಜನರಿಗೆ ತಿಳಿದಿದೆ. ನೀವು ನಿಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಿತ್ತು' ಎಂದು ಕಿಡಿಕಾರಿದ್ದಾರೆ.

'ಇಂದು ನಿಮ್ಮ ಕೆಲಸದ ದಿನ, ಲಖನೌನಲ್ಲಿ ದೊಡ್ಡ ಕಾರ್ಯಕ್ರಮವಿದೆ ಎಂದು ಹೇಳಿದ್ದೀರಿ. ನಿಮ್ಮ ಕೆಲಸ ನೀವು ಮಾಡಿ, ಯಾರೂ ನಿಮ್ಮನ್ನು ಕೇಳಿಲ್ಲ. ನಿಮ್ಮ ಕಾರ್ಯಕ್ರಮ ಲಖನೌದಲ್ಲಿರಲಿ ಅಥವಾ ಲಂಡನ್‌ನಲ್ಲಿರಲಿ, ಯಾರೂ ಅದರಲ್ಲಿ ಆಸಕ್ತಿ ಹೊಂದಿಲ್ಲ. ದೇಶವೇ ಒಬ್ಬ ದಿಗ್ಗಜನನ್ನು ಕಳೆದುಕೊಂಡು ಶೋಕಿಸುತ್ತಿರುವ ದಿನದಂದು, ನಿಮ್ಮ ಸ್ವಂತ ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ಮಾತನಾಡುವುದು ನಿಮ್ಮ ಸಂಕುಚಿತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ' ಎಂದೂ ಸುರೇಶ್ ಶ್ಯಾಮ್‌ಲಾಲ್ ಗುಪ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಟೂ ಆರೋಪ

'ಹಾರ್ನ್‌ ಒಕೆ ಪ್ಲೀಸ್‌' ಸಿನಿಮಾ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಹಿಂಸೆ ನೀಡಿದ್ದಾರೆ' ಎಂದು ತನುಶ್ರೀ ದತ್ತಾ ಅವರು 2018ರಲ್ಲಿ ಮೀಟೂ ಆರೋಪ ಹೊರಿಸಿದ್ದರು.

ಚಿತ್ರೀಕರಣವು 2008ರಲ್ಲಿ ನಡೆದಿತ್ತು. ಪಾಟೇಕರ್‌ ಅವರು ಮೊದಲ ದಿನದಿಂದಲೂ ತಾನು ನಿರ್ದೋಷಿ ಎನ್ನುತ್ತಲೇ ಬಂದಿದ್ದರು. ತನಿಖೆಯ ಬಳಿಕ ಪೊಲೀಸರು 2019 ನ್ಯಾಯಾಲಯಕ್ಕೆ 'ಬಿ ರಿಪೋರ್ಟ್‌' ಸಲ್ಲಿಸಿದ್ದರು. ಲೈಂಗಿಕ ದೌರ್ಜನ್ಯ ನಡೆದಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಪೊಲೀಸರು ಹೇಳಿದ್ದರು. ಪಾಟೇಕರ್‌ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿರಲಿಲ್ಲ. ಪ್ರಕರಣವು ಅಲ್ಲಿಗೆ ಅಂತ್ಯ ಕಂಡಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries