ಕಾಸರಗೋಡು: ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಎಲ್.ಡಿ. ಕ್ಲರ್ಕ್ ಹುದ್ದೆಗಳಿಗಾಗಿ ಕೇರಳ ಪಬ್ಲಿಕ್ ಸರ್ವೀಸ್ ಕಮೀಶನ್ ನಡೆಸುವ ಕನ್ನಡ ಬಲ್ಲ ಉದ್ಯೋಗಾರ್ಥಿಗಳ ಆಯ್ಕೆಗಾಗಿ ನಡೆಸುವ ಪರೀಕ್ಷೆ ಅಕ್ಟೋಬರ್ 10 ರಂದು ನಡೆಯಲಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತೇವೆ ಎಂಬುದನ್ನು ದೃಢೀಕರಿಸಲು ಜುಲೈ 23 ರಿಂದ ಆಗೋಸ್ಟ್ 11 ರ ತನಕ ಕಮೀಶನ್‍ನ ವೆಬ್‍ಸೈಟ್ ಮೂಲಕ ದಾಖಲೀಕರಿಸಬೇಕಾಗಿದೆ. ದಾಖಲಾತಿ ಮಾಡಿದ ಅಭ್ಯರ್ಥಿಗಳು ಅಕ್ಟೋಬರ್ 9 ರಿಂದ ಅಡ್ಮಿನೇಶನ್ ಸರ್ಟಿಫಿಕೇಟ್ ಪಡೆಯಬಹುದು.
ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು - ಮಂಜೇಶ್ವರ ತಾಲೂಕುಗಳ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಈ ಮೂಲಕ ಕನ್ನಡ ಉದ್ಯೋಗಾರ್ಥಿಗಳಿಗೆ ಅಪಾರ ಉದ್ಯೋಗ ದೊರಕುವ ಅವಕಾಶವಿದೆ. ಕೇರಳ ಪಿ.ಎಸ್ಸಿ. ಪರೀಕ್ಷೆ ನಡೆಸುವ ಕುರಿತು ವಿಳಂಬ ಮಾಡುವ ಬಗ್ಗೆ ಕನ್ನಡ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ನಡೆಸಿದೆ. ಈ ಕುರಿತು ಕನ್ನಡ ಹೋರಾಟ ಸಮಿತಿಯ ನಿಯೋಗ ತಿರುವನಂತಪುರಕ್ಕೆ ತೆರಳಿ ಪಿ.ಎಸ್ಸಿ. ಚೆಯರ್‍ಮೇನ್ ಅವರನ್ನು ಒತ್ತಾಯಿಸಲಾಗಿತ್ತು. ಉದ್ಯೋಗಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಆನ್‍ಲೈನ್ ಮೂಲಕ ನಡೆಸುವ ಪರೀಕ್ಷೆಯಲ್ಲಿ ಭಾಗವಹಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

