ಉಪ್ಪಳ: ಯುಡಿಎಫ್ ನ್ನು ನಾಶಗೊಳಿಸಲು ರಾಜ್ಯದಲ್ಲಿ ಸಿಪಿಎಂ-ಬಿಜೆಪಿ ಪರಸ್ಪರ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು.
ಮಂಜೇಶ್ವರದಲ್ಲಿ ಸಿಪಿಎಂ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪರವಾಗಿ ನಿಲುವು ತೆಗೆದುಕೊಂಡಿತು. ಕಾಂಗ್ರೆಸ್ ನ್ನು ಸೋಲಿಸಲು ಉಭಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದು ಅಪಾಯಕಾರಿ. ದೇಶದಲ್ಲಿ ಬಿಜೆಪಿಗೆ ಸಮರ್ಥ ಎದುರಾಳಿ ಇದ್ದರೆ ಕಾಂಗ್ರೆಸ್ ಮಾತ್ರ. ನರೇಂದ್ರ ಮೋದಿಯವರನ್ನು ಎದುರಿಸುವ ಏಕೈಕ ನಾಯಕ ರಾಹುಲ್ ಗಾಂಧಿ ಎಂದು ಚೆನ್ನಿತ್ತಲ ಹೇಳಿದರು.
ಯುಡಿಎಫ್ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪೈವಳಿಕೆ ಕುಡಾಲ್ ಮೇರ್ಕಳದಲ್ಲಿ ಮಂಗಳವಾರ ಆಯೋಜಿಸಿದ್ದ ಕುಟುಂಬ ಪುನರ್ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುಡಿಎಫ್ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಅಳ್ವ ಮಡ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಮಾಜಿ ಸಚಿವ ಬಿ.ರಾಮನಾಥ ರೈ, ಯುಡಿಎಫ್ ಜಿಲ್ಲಾಧ್ಯಕ್ಷ ಸಿ.ಟಿ.ಅಹ್ಮದಾಲಿ, ಯುಡಿಎಫ್ ಕ್ಷೇತ್ರದ ಕನ್ವೀನರ್ ಎಂ.ಅಬ್ಬಾಸ್ ಮತ್ತು ಕಾರ್ಯಕಾರಿ ಅಧ್ಯಕ್ಷ ಟಿ.ಎ. ಮೂಸಾ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಸಿ.ಕೆ. ಶ್ರೀಧರನ್, ಕೆಪಿಸಿಸಿ ಕಾರ್ಯದರ್ಶಿ ನ್ಯಾಯವಾದಿ .ಕೆ. ಆರಿಫ್, ಸಾಜಿದ್ ಮವ್ವಲ್, ಹರ್ಷಾದ್ ವರ್ಕಾಡಿ, ಲಕ್ಷ್ಮಣ ಪ್ರಭು ಕುಂಬಳೆ, ಕರಿವೆಳ್ಳೂರ್ ವಿಜಯನ್, ಕೆ. ಸಾಮಿಕುಟ್ಟಿ, ಡಿಎಂಕೆ ಮೊಹಮ್ಮದ್, ಸತ್ಯನ್ ಸಿ. ಉಪ್ಪಳ, ಹನೀಫ್ ಹಾಜಿ ಪೈವಳಿಕೆ, ಹಮೀದ್ ಕುಂಞಲಿ, ಅಂದುಂಞÂ ಹಾಜಿ ಚಿಪ್ಪಾರ್, ಝಡ್.ಎ.ಮೊಗ್ರಾಲ್, ಅಜೀಜ್ ಕಳಾಯಿ, ಅಬ್ದುಲ್ ರಹಮಾನ್ ಬಂದ್ಯೋಡು, ಎ. ಮುಖ್ತಾರ್, ಬಿ.ಎಂ.ಮುಸ್ತಫಾ, ಮಜೀದ್ ಪಚ್ಚಂಬಳ, ರಿಯಾಜ್ ಚಿಪ್ಪಾರ್, ರಜಾಕ್ ಅಚಕರೆ, ಹನೀಫ್ ಮೇರ್ಕಳ, ಯೂಸುಫ್ ಹೇರೂರ್, ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.


