ಮುಳ್ಳೇರಿಯ: ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ವಿಜೇತ ನಾರಾಯಣ ದೇಲಂಪಾಡಿ ಅವರಿಗೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸಭಾಭವನದಲ್ಲಿ ಶನಿವಾರ ಅಭಿನಂದನಾಪೂರ್ವಕ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಕೀರಿಕ್ಕಾಡು ವಿಶ್ವವಿನೋದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ನಿವೃತ್ತ ಅಧ್ಯಾಪಕ ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ ಅವರು ಪ್ರಶಸ್ತಿ ಪುರಸ್ಕøತರನ್ನು ಅಭಿನಂದಿಸಿ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಶುಭಾಶಂಸನೆ ಗೈದರು. ನಿವೃತ್ತ ಅಧ್ಯಾಪಕ ಡಿ. ರಾಮಣ್ಣ ಮಾಸ್ತರ್, ಕಲಾವಿದ ಐತ್ತಪ್ಪ ಗೌಡ ಮುದಿಯಾರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಹಿರಿಯ ಮದ್ದಳೆಗಾರ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ನಂದಕಿಶೋರ ಬನಾರಿ ಉಪಸ್ಥಿತರಿದ್ದರು. ವಿಕೇಶ್ ರೈ ಶೇಣಿ ಅವರು ನಿರೂಪಿಸಿದರು. ಈಶ್ವರಿ ಪೃಥ್ವಿ ಅವರ ಪ್ರಾರ್ಥನೆಯೊಂದಿಗೆ ಮಾಸ್ಟರ್ ಷಣ್ಮುಖ ಪೆರ್ಲ ಅವರಿಂದ ದುರ್ಗಾಸೂಕ್ತ ಮಂತ್ರಘೋಷದೊಂದಿಗೆ ಆರಂಭವಾದ ಈ ಅಭಿನಂದನಾ ಸಮಾರಂಭದಲ್ಲಿ ಕೇರಳ ರಾಜ್ಯದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾರಾಯಣ ದೇಲಂಪಾಡಿ ಅವರನ್ನು ಶಾಲು ಹೊದೆಸಿ ಫಲ ತಾಂಬೂಲವಿತ್ತು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಬನಾರಿ ಕಲಾ ಸಂಘ ಹಾಗೂ ತಮ್ಮ ಕುಟುಂಬದೊಳಗಿನ ಅವಿನಾಭಾವ ಸಂಬಂಧವನ್ನು ಸ್ಮರಿಸುತ್ತಾ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಎಂ.ರಮಾನಂದ ರೈ ದೇಲಂಪಾಡಿ ಅವರು ವಂದನಾರ್ಪಣೆ ಗೈದರು.

