18 ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧಗಳು ಮತ್ತು 13 ಅಭ್ಯರ್ಥಿಗಳು ಕೊಲೆಗೆ ಸಂಬಂಧಿಸಿದ ಪ್ರಕರಣಗಳು ತಮ್ಮ ವಿರುದ್ಧ ಇರುವುದನ್ನು ಘೋಷಿಸಿದ್ದಾರೆ.
ಎಐಎಡಿಎಂಕೆಯ ಶೇ.69ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮನಲ್ ಪ್ರಕರಣಗಳಿದ್ದು, ಈ ಪೈಕಿ ಶೇ.35ರಷ್ಟು ಗಂಭೀರ ಸ್ವರೂಪದ್ದಾಗಿವೆ. ಡಿಎಂಕೆಯ ಶೇ.40ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು,ಸುಮಾರು ಶೇ.18ರಷ್ಟು ಗಂಭೀರ ಪ್ರಕರಣಗಳಾಗಿವೆ.
ಬಿಜೆಪಿಯ ಶೇ.48 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ಈ ಪೈಕಿ ಶೇ.27ರಷ್ಟು ಗಂಭೀರ ಸ್ವರೂಪದ್ದಾಗಿವೆ. ಕಾಂಗ್ರೆಸ್‌ನ ಅರ್ಧದಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಈ ಪೈಕಿ ಶೇ.18ರಷ್ಟು ಗಂಭೀರ ಪ್ರಕರಣಗಳಾಗಿವೆ.
ನಟ ವಿಜಯ್ ಅವರ ಟಿವಿಕೆಯ ಶೇ.40 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು,ಇವುಗಳಲ್ಲಿ ಶೇ.19 ಗಂಭೀರ ಪ್ರಕರಣಗಳಾಗಿವೆ. ಪಕ್ಷವು ಇದೇ ಮೊದಲ ಬಾರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ.
ತಮಿಳುನಾಡಿನಲ್ಲಿ ಎ.23ರಂದು ಚುನಾವಣೆ ನಡೆಯಲಿದ್ದು,ಮೇ 4ರಂದು ಮತ ಎಣಿಕೆ ನಡೆಯಲಿದೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ 4,023 ಜನರು ಚುನಾವಣಾ ಕಣದಲ್ಲಿದ್ದಾರೆ.

