HEALTH TIPS

ಅಮೆರಿಕ ಜೊತೆಗಿನ ನಿಕಟ ಆರ್ಥಿಕ ಸಂಬಂಧವು ''ದೌರ್ಬಲ್ಯ''ದಂತಾಗಿದೆ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಒಟ್ಟಾವ: ಅಮೆರಿಕದೊಂದಿಗಿನ ದಶಕಗಳ ಅವಧಿಯ ಭಾಗೀದಾರಿಕೆ ಬಳಿಕ, ಉಭಯ ದೇಶಗಳ ನಡುವಿನ ನಿಕಟ ಆರ್ಥಿಕ ಸಂಬಂಧವು ಕೆನಡದ ''ದೌರ್ಬಲ್ಯ''ದಂತಾಗಿದೆ'' ಹಾಗೂ ಅದನ್ನು ಸರಿಪಡಿಸಬೇಕಾಗಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ.

ಭಾನುವಾರ ಬಿಡುಗಡೆಗೊಳಿಸಿದ 10 ನಿಮಿಷಗಳ ವೀಡಿಯೊದಲ್ಲಿ, ಅಮೆರಿಕದೊಂದಿಗಿನ ಕೆನಡಾದ ಸಂಬಂಧದ ಬಗ್ಗೆ ಕಾರ್ನಿ ಟಿಪ್ಪಣಿಗಳನ್ನು ಮಾಡಿದ್ದಾರೆ.

ಯಾವುದೇ ಒಂದು ದೇಶವನ್ನು ಅತಿಯಾಗಿ ಅವಲಂಬಿಸುವುದರಿಂದ ಕೆನಡಾ ದೂರ ಸರಿಯಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

''ಜಗತ್ತು ಈಗ ಹೆಚ್ಚು ಅಪಾಯಕಾರಿಯಾಗಿದೆ ಮತ್ತು ವಿಭಜನೆಗೊಂಡಿದೆ. ಅಮೆರಿಕವು ವ್ಯಾಪಾರ ಕುರಿತ ತನ್ನ ಧೋರಣೆಯಲ್ಲಿ ಮೂಲಭೂತ ಬದಲಾವಣೆಯನ್ನು ಮಾಡಿದೆ. ಅದು ತನ್ನ ಸುಂಕಗಳನ್ನು ಮಹಾ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಇದ್ದ ಮಟ್ಟಕ್ಕೆ ಹೆಚ್ಚಿಸಿದೆ'' ಎಂದು ಕಾರ್ನಿ ಹೇಳಿದ್ದಾರೆ.

''ಅಮೆರಿಕದೊಂದಿಗಿನ ನಮ್ಮ ನಿಕಟ ಸಂಬಂಧದ ಹಿನ್ನೆಲೆಯಲ್ಲಿ ನಾವು ಹಿಂದೆ ಹೊಂದಿದ್ದ ನಮ್ಮ ಶಕ್ತಿಗಳು ಈಗ ದೌರ್ಬಲ್ಯಗಳಾಗಿ ಬದಲಾಗಿವೆ. ಆ ದೌರ್ಬಲ್ಯಗಳನ್ನು ನಾವು ಸರಿಪಡಿಸಬೇಕಾಗಿದೆ'' ಎಂದು ಅವರು ಹೇಳಿದ್ದಾರೆ.

ಕೆನಡಾ ಪ್ರಧಾನಿಯ ಹೇಳಿಕೆಗಳು, ದಶಕಗಳ ಆರ್ಥಿಕ ಸಹಕಾರದ ಬಳಿಕ, ಅಮೆರಿಕ-ಕೆನಡಾ ಸಂಬಂಧದಲ್ಲಿ ಆಗುತ್ತಿರುವ ಬದಲಾವಣೆಯತ್ತ ಬೆಟ್ಟು ಮಾಡುತ್ತಿವೆ ಎಂಬುದಾಗಿ ವಿಶ್ಲೇಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರ ದೇಶಗಳಿಗೂ ಶತ್ತು ದೇಶಗಳಿಗೂ ಅಗಾಧ ಸುಂಕ ವಿಧಿಸುವ ಬೆದರಿಕೆಗಳನ್ನು ಹಾಕುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries