HEALTH TIPS

ಕ್ರೈಮಿಯದಲ್ಲಿ ರಶ್ಯ ಯುದ್ಧನೌಕೆಗಳ ಮೇಲೆ ಉಕ್ರೇನ್ ದಾಳಿ

ಕೀವ್: ಉಕ್ರೇನ್ ಮತ್ತು ರಶ್ಯ ರವಿವಾರ ರಾತ್ರಿ ಪರಸ್ಪರರ ವಿರುದ್ಧ ದಾಳಿಗಳನ್ನು ನಡೆಸಿವೆ. ಉಕ್ರೇನ್‌ನ ಡ್ರೋನ್‌ಗಳು ಕಪ್ಪು ಸಮುದ್ರದಲ್ಲಿರುವ ರಶ್ಯದ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸಿದರೆ, ರಶ್ಯವು ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನಾದ್ಯಂತ ಇರುವ ಹಲವು ವಲಯಗಳ ಮೇಲೆ ಬಾಂಬ್‌ಗಳನ್ನು ಹಾಕಿದೆ.

ರಶ್ಯ-ಆಕ್ರಮಿತ ಕ್ರೈಮಿಯದ ಸೆವಸ್ಟೊಪೊಲ್ ಕೊಲ್ಲಿಯಲ್ಲಿರುವ ರಶ್ಯದ ಎರಡು ಯುದ್ಧನೌಕೆಗಳು ಮತ್ತು ಒಂದು ರೇಡಾರ್ ಸ್ಟೇಶನ್ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್‌ನ ಜಿಯುಆರ್ ಸೇನಾ ಬೇಹುಗಾರಿಕಾ ಘಟಕ ಹೇಳಿಕೊಂಡಿದೆ. 150 ಮಿಲಿಯ ಡಾಲರ್ (ಸುಮಾರು 1,395 ಕೋಟಿ ರೂಪಾಯಿ) ಬೆಲೆಯ ಹಡಗುಗಳ ಮೇಲೆ ಡ್ರೋನ್ ಯಶಸ್ವಿಯಾಗಿ ಅಪ್ಪಳಿಸಿದೆ ಮತ್ತು ರೇಡಾರ್ ಸಲಕರಣೆಯೊಂದು ಧ್ವಂಸಗೊಂಡಿದೆ ಎಂದು ಅದು ಹೇಳಿದೆ.

ರಶ್ಯದಲ್ಲಿ, ಉಕ್ರೇನ್ ಡ್ರೋನ್‌ಗಳು ಟುವಾಪ್ಸ್ ಬಂದರಿನ ಮೇಲೆ ದಾಳಿ ನಡೆಸಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಮೃತರಾಗಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ. ಸಾಗಾಟ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವೆನಿಯಮಿನ್ ಕೊಂಡ್ರಟೀವ್ ತಿಳಿಸಿದ್ದಾರೆ.

ಈ ಬಂದರಿನ ಮೇಲೆ ನಡೆದ ದಾಳಿಯು ಮೂರು ದಿನಗಳಲ್ಲಿ ಎರಡನೆಯದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries