HEALTH TIPS

ವರದಾ ನದೀತಟದಲ್ಲಿ ಇಂದಿನಿಂದ ಸಂಭ್ರಮ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ-ಇಂದು ಹಸಿರುವಾಣಿ ಮೆರವಣಿಗೆ; ನಾಳೆ ರಾಜಗೋಪುರ, ಭೋಜನಶಾಲೆ ಲೋಕಾರ್ಪಣೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇಂದು ಆರಂಭವಾಗಲಿದೆ. ಪೂರ್ವಾಹ್ನ 7 ಗಂಟೆಗೆ ಗಣಪತಿ ಹೋಮ, 8.30ಕ್ಕೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಇವರಿಂದ ಉಗ್ರಾಣಮುಹೂರ್ತ, 9.30ಕ್ಕೆ ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಹೊರಟು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನವಾಗಿ ಬದಿಯಡ್ಕ ಪೇಟೆಯಲ್ಲಿ ಸಾಗಿ ಭವ್ಯ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ಸಂಜೆ 6ಕ್ಕೆ ವಾಸ್ತುಶಿಲ್ಪಿ ಶ್ರೀ ಕೃಷ್ಣಪ್ರಸಾದ ಮುನಿಯಂಗಳ ಇವರ ಉಪಸ್ಥಿತಿಯಲ್ಲಿ ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ. 6ಕ್ಕೆ  ನಟರಾಜ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ. ಏಷ್ಯಾನೆಟ್ ಚಾನೆಲ್ ಧಾರವಾಹಿ ನಟಿ ಆದಿರಾ ಲಕ್ಷ್ಮಣ್ ಇವರಿಂದ ಉದ್ಘಾಟನೆ, ಬ್ರಹ್ಮಕಲಶೋತ್ಸ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಸಂಜೆ 6.30ರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ, ರಾತ್ರಿ 9 ರಿಂದ ನೃತ್ಯಗುರು ಸೌರಮ್ಯ ಶೈಜು ಪರಕ್ಕಿಲ ಮಧೂರು ಬಳಗದವರಿಂದ ನೃತ್ಯಾರ್ಚನೆ ನಡೆಯಲಿದೆ.


ನಾಳೆ (ಏ.18) ರಾಜಗೋಪುರ ಉದ್ಘಾಟನೆ :

ನವೀಕರಿಸಿದ ರಾಜಗೋಪುರ, ರಾಜಾಂಗಣ ಮೇಲ್ಚಾವಣಿ ಮತ್ತು ನೂತನ ಭೋಜನ ಶಾಲೆ ಲೋಕಾರ್ಪಣೆ ನಡೆಯಲಿದೆ. ಪೂರ್ವಾಹ್ನ 9.30ಕ್ಕೆ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 6 ರಿಂದ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ಜರಗಲಿದೆ. ನಟರಾಜ ವೇದಿಕೆಯಲ್ಲಿ ಬೆಳಗ್ಗೆ 9 ರಿಂದ ಶಾಸ್ತ್ರೀಯ ಸಂಗೀತ, ಯಕ್ಷಗಾನ ತಾಳಮದ್ದಳೆ ಜರಗಲಿದೆ. ಸಂಜೆ 4.15ಕ್ಕೆ ಎಡನೀರು ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭೆಗಳ ಉದ್ಘಾಟನಾ ಸಮಾರಂಭ. ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಎಡನೀರು ಮಠ ಹಾಗೂ ಚಿತ್ರಾಪುರ ಮಠದ ಪರಮಪೂಜ್ಯ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಆಶೀರ್ವಚನ. ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತರು ಶ್ರೀ ಭೀಮೇಶ್ವರ ಜೋಷಿ ಅವರಿಂದ ಉದ್ಘಾಟನೆ, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಸಹಿತ ನಾಡಿನ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸುವರು. ಸಂಜೆ 7.30 ರಿಂದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿಸಂಗೀತ. 9 ರಿಂದ ವಿದ್ವಾನ್ ಶ್ರೀ ಬಾಲಕೃಷ್ಣ ಮಾಸ್ತರ್ ನಾಟ್ಯನಿಲಯಂ ಮಂಜೇಶ್ವರ ಇವರ ಶಿಷ್ಯಂದಿರು ಶ್ರೀ ಉದನೇಶ್ವರ ಶಾಖೆ ಬದಿಯಡ್ಕ ಇವರಿಂದ ಭರತನಾಟ್ಯ ನಡೆಯಲಿದೆ. 

ಕೈಲಾಸ ವೇದಿಕೆಯಲ್ಲಿ ಬೆಳಗ್ಗೆ ಹತ್ತರಿಂದ ಶಾಸ್ತ್ರೀಯ ಸಂಗೀತ, ಹರಿಕಥೆ, ಯಕ್ಷಗಾನಾರ್ಚನೆ, ಗಾನಸುಧಾ, ಶಾಸ್ತ್ರೀಯ ಸಂಗೀತ, ಭರತನಾಟ್ಯ. ಸಂಜೆ 6 ರಿಂದ ಶ್ರೀ ಉದನೇಶ್ವರ ಮಾತೃಮಂಡಳಿ ಸದಸ್ಯರಿಂದ ಮೆಗಾ ತಿರುವಾದಿರ, 7 ರಿಂದ ಶ್ರೀ ವಿಷ್ಣುಮೂರ್ತಿ ಮಾತೃಮಂಡಳಿ ಬೇಳ ಇವರಿಂದ ಕೈಕೊಟ್ಟಿಕಳಿ ನಡೆಯಲಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries