ಚಾಯಿಬಾಸಾ : ಜಾರ್ಖಂಡ್ನ ಪಶ್ಚಿಮ ಸಿಂಗಬುಮ್ ಜಿಲ್ಲೆಯ ಕೊಲ್ಹಾನ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಿರಂತರ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಯಿಲ್ಕೆರಾ ಮತ್ತು ಟೊಂಟೊ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಜಿಲ್ಲಾ ಪೊಲೀಸರು ಮತ್ತು ಸಿಆರ್ಪಿಎಫ್ ಜಂಟಿಯಾಗಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಪಶ್ಚಿಮ ಸಿಂಗಬುಮ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ತಿಳಿಸಿದ್ದಾರೆ.
ಈ ಕ್ಷಣದಲ್ಲಿ ನಕ್ಸಲರ ಯಾವು ಗುಂಪು ಈ ಗುಂಡಿನ ಕಾಳಗದಲ್ಲಿ ಭಾಗಿಯಾದೆ ಎಂದು ತಿಳಿಯುವುದು ಕಷ್ಟ. ಅವರನ್ನು ಪ್ರದೇಶದಿಂದ ಹೊರದಬ್ಬುವವರೆಗೆ ನಮ್ಮ ಕಾರ್ಯಾಚರಣೆ ನಡೆಯುತ್ತಿರುತ್ತದೆ ಎಂದು ಅವರು ಹೇಳಿದ್ದಾರೆ
ಈ ವರ್ಷದ ಆರಂಭದಲ್ಲಿ ಪ್ರದೇಶದ ಹಲವು ನಕ್ಸಲ್ ಉನ್ನತ ನಾಯಕರನ್ನು ಹತ್ಯೆ ಮಾಡಲಾಗಿತ್ತು. ಅದರ ನಂತರ, ಸಿಪಿಐ (ಮಾಮೋವಾದಿ) ಪಾಲಿಟ್ಬ್ಯೂರೊ ಸದಸ್ಯ ಮಿಸಿರ್ ಬೆಸ್ರಾ ಮಾತ್ರ ತಮ್ಮ ಗುಂಪಿನೊಂದಿಗೆ ಇಲ್ಲಿ ಸಕ್ರಿಯರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ಪತ್ತೆಗಾಗಿ ₹1 ಕೋಟಿ ಬಹುಮಾನ ಘೋಷಿಸಲಾಗಿದೆ.

