ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 8ನೇ ದಿನ ಶುಕ್ರವಾರ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ತಾಂತ್ರಿಕ ಕಾರ್ಯಕ್ರಮಗಳು ಜರಗಿತು. ಪ್ರಾತಃಕಾಲ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಸಪ್ತಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. ಮಧ್ಯಾಹ್ನ ಅಂಕುರ ಪೂಜೆ, ಸೋಪಾನಪೂಜೆ, ಮಹಾಪೂಜೆ ನಡೆಯಿತು.
ಇಂದು ಏ.25ರಂದು ಶನಿವಾರ ನಡೆಯುವ ಕಾರ್ಯಕ್ರಮಗಳು :
ಬೆಳಗ್ಗೆ 6ರಿಂದ ಗಣಪತಿಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶಾಭಿಷೇಕ, ಕುಂಭೇಶ ಕರ್ಕರಿ ಪೂಜೆ, ಅಂಕುರ ಪೂಜೆ, ಸೋಪಾನಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಸೋಪಾನ ಪೂಜೆ, ಅಂಕುರ ಪೂಜೆ, ಮಹಾಪೂಜೆ, ಸಂಜೆ 6 ರಿಂದ ಪರಿಕಲಶ ಪೂಜೆ, ಅವಾಸ ಹೋಮ, ಅವಾಸ ಬಲಿ, ಕಲಶಾಧಿವಾಸ, ಸೋಪಾನಪೂಜೆ, ಮಹಾಬಲಿಪೀಠಾವಾಸ ಜರಗಲಿದೆ.
ನಾಳೆ (ಏ.26)ಬ್ರಹ್ಮಕಲಶಾಭಿಷೇಕ :
ಬೆಳಗ್ಗೆ 5 ಗಂಟೆಗೆ ಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವ ಹೋಮಗಳ ಕಲಶಾಭಿಷೇಕ ನಡೆಯಲಿದೆ. ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ - ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಪೂರ್ವಾಹ್ನ 11.30ಕ್ಕೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ಆಗಮನ, ಪೂರ್ಣಕುಂಭ ಸ್ವಾಗತ, ಆಶೀರ್ವಚನ ನಡೆಯಲಿದೆ. ಸಂಜೆ 7ರಿಂದ ಶ್ರೀದೇವರ ಉತ್ಸವಬಲಿ ನಡೆಯಲಿದೆ.
ವಯೋಲಿನ್ ಫ್ಯೂಷನ್ ಗಂಗಾತರಂಗಮ್ :
ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ಕುಮಾರಿ ಗಂಗಾ ಶಶಿಧರನ್ ತ್ರಿಶೂರು ಮತ್ತು ಬಳಗದವರಿಂದ ರಾತ್ರಿ 9 ರಿಂದ ವಯೋಲಿನ್ ಫ್ಯೂಷನ್ `ಗಂಗಾತರಂಗಮ್' ಜರಗಲಿದೆ.

