HEALTH TIPS

ನೋವು ನಿವಾರಕ ಮಾತ್ರೆ ಅತಿಯಾಗಿ ಸೇವನೆ-ವ್ಯಕ್ತಿ ಮೃತ್ಯು

ಪೆರ್ಲ: ಅತಿಯಾದ ಪ್ರಮಾಣದಲ್ಲಿ ನೋವುನಿವಾರಕ ಮಾತ್ರೆ ಸೇವಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ, ಮೃತಪಟ್ಟಿದ್ದಾರೆ. ಪೆರ್ಲ ಸನಿಹದ ಬಜಕೂಡ್ಲು ನಿವಾಸಿ ಮುಂಡಪ್ಪ ರೈ (59) ಮೃತಪಟ್ಟ ವ್ಯಕ್ತಿ. 

ಅಸೌಖ್ಯಪೀಡಿತರಾಗಿದ್ದ ಇವರು, ಚಿಕಿತ್ಸೆ ಮಧ್ಯೆ ಹೆಚ್ಚಿನ ಪ್ರಮಾಣದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ, ಗಂಭೀರಾವಸ್ಥೆಯಲ್ಲಿದ್ದ ಇವರನ್ನು ತಕ್ಷಣ  ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರರಲಿಲ್ಲ. ಕೃಷಿಕ ಹಾಗೂ ಉತ್ತಮ ಟೈಲರ್ ಆಗಿದ್ದ ಇವರು, ಬಜಕೂಡ್ಲು, ಪೆರ್ಲ ಸೇರಿದಂತೆ ವಿವಿಧೆಡೆ ಟೈಲರಿಂಗ್ ವೃತ್ತಿ ನಡೆಸಿದ್ದರು.  ನಂತರ ವಿದೇಶದಲ್ಲೂ ಟೈಲರಿಂಗ್ ವೃತ್ತಿ ಮುಂದುವರಿಸಿ, ಕೆಲವು ವರ್ಷಗಳ ಹಿಂದೆ ಊರಿಗೆ ವಾಪಸಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries