ಮಂಜೇಶ್ವರ: ಸಮುದ್ರ ವೀಕ್ಷಿಸಲು ತೆರಳಿದ್ದ ವೇಳೆ ಬಲವಾದ ಅಲೆಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18) ಮೃತದೇಹ ಗುರುವಾರ ಪತ್ತೆಹಚ್ಚಲಾಯಿತು. ಸಮುದ್ರ ದಡದಿಂದ ಸುಮಾರು ಎರಡುವರೆ ಕಿ.ಮೀ ದೂರದಲ್ಲಿ ಮ್ಥದೇಹ ಕಂಡುಬಂದಿದೆ. ಮೀನು ಕಾರ್ಮಿಕರಾದ ಬಶೀರ್, ಶೆರೀಫ್, ಖಲೀಲ್ ಹಾಗೂ ಅಸೀಸ್ ಮೃತದೇಹ ಪತ್ತೆಹಚ್ಚಿ ಕರಾವಳಿ ಪೊಲೀಸರ ಸಹಾಐದೊಂದಿಗೆ ದಡಕ್ಕೆ ತಲುಪಿಸಿದ್ದಾರೆ.
ಮೊಹಮ್ಮದ್ ಸೈನುಲ್ ಆಬಿದ್ ತನ್ನ ತಾಯಿ ಹಾಗೂ ಕುಟುಂಬದವರೊಂದಿಗೆ ಬುಧವಾರ ಸಂಜೆ ಕೊಳಕೆ ಬೀಚ್‍ಗೆ ತೆರಳಿದ್ದು, ಸಮುದ್ರ ಬದಿಯಲ್ಲಿ ನಿಂತಿದ್ದ ಮೊಹಮ್ಮದ್ ಸೈನುಲ್ ಆಬಿದ್ ಹಾಗೂ ಈತನ ಸಹೋದರಿ ಅಲೆಯಲ್ಲಿ ಸಿಲುಕಿದ್ದರು. ಈ ಸಂದರ್ಭ ಜತೆಗಿದ್ದವರು ಬೊಬ್ಬಿಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದವರು ಸಹೋದರಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದರೂ, ಮೊಹಮ್ಮದ್ ಸೈನುಲ್ ಆಬಿದ್‍ನನ್ನು ರಕ್ಷಿಸಲಾಗಲಿಲ್ಲ. ಮಾಹಿತಿ ಲಭಿಸಿದ ಮಂಜೇಶ್ವರ ಪೆÇಲೀಸರು, ಅಗ್ನಿಶಾಮಕ ದಳ ಹಾಗೂ ಕುಂಬಳೆ ಕರಾವಳಿ ಪೆÇಲೀಸರ ಸಹಾಯದಿಂದ ಶೋಧ ಕಾರ್ಯ ಆರಂಭಿಸಿದ್ದರು. ರಾತ್ರಿಯಿಡೀ ಸಮುದ್ರದಲ್ಲಿ ಹುಡುಕಾಟ ನಡೆಸಿದರೂ ಮೊಹಮ್ಮದ್ ಸೈನುಲ್ ಆಬಿದ್‍ನನ್ನು ಪತ್ತೆಯಾಗದ ಹಿನ್ನೆಲೆಯಲ್ಲಿ ಗುರುವಾರವೂ ಹುಡುಕಾಟ ಮುಂದುವರಿಸಲಾಗಿತ್ತು.

