ಕಾಸರಗೋದು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಬೆಡಿ ಉತ್ಸವ ಏ. 17ರಂದು ನಡೆಯಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಐದು ದಿವಸಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಮಧೂರು ಬೆಡಿಗೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸಲಾಗುತ್ತಿದೆ.
17ರಂದು ಬೆಳಗ್ಗೆ 5ಕ್ಕೆ ಉತ್ಸವ ಬಲಿಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ನಂತರ ದರ್ಶನ ಬಲಿ, ಮಧ್ಯಾಹ್ನ ತುಲಾಭಾರ ಸೇವೆಗಳು, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, 7ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಘೋಷಯಾತ್ರೆ, ಶ್ರೀ ವೀರಮಾರುತಿ ವ್ಯಾಯಮ ಶಾಲೆ ಕಾಸರಗೋಡು ಇವರ ತಾಲೀಮು ಪ್ರದರ್ಶನ ನಡೆಯುವುದು.
ರಾತ್ರಿ 8.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, 10ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ, ಶಯನ, ಕವಾಟ ಬಂದನ ನಡೆಯುವುದು.
18ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ಮಧ್ಯಾಹ್ನ ತುಲಾಭಾರ ಸೇವೆಗಳು, ಸಂಜೆ 5ಕ್ಕೆ ತಾಯಂಬಕ, ವೀಣಾರಾಧನೆ, ರಆತ್ರಿ 9ಕ್ಕೆ ಉತ್ಸವ ಬಲಿ, 10ಕ್ಕೆ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಶ್ರೀ ಕ್ಷೇತ್ರದ ಆರಾಟು ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.
ಪ್ರತಿ ದಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು.



