ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪ್ರತಿಷ್ಠಾ ಸುವರ್ಣ ಮಹೋತ್ಸವದ ಅಂಗವಾಗಿ ಚತುರ್ವೇದ ಪಾರಾಯಣ, ವಿಷ್ಣು ಭಾಗವತ, ದೇವೀ ಭಾಗವತ ಪಾರಾಯಣ ಸಹಿತ ಶತಚಂಡಿಕಾಯಾಗದ ಪೂರ್ಣಾಹುತಿಯು ಮೇ 8ರಿಂದ 13ರ ವರೆಗೆ ಜರುಗಲಿದೆ. ಶೃಂಗೇರಿ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಶ್ರೀ ಸತ್ಯನಾರಾಯಣ ಸ್ವಾಮಿಗೆ ಲಕ್ಷಾರ್ಚನಾ ಕಲಶಾಭಿಷೇಕವು ಶ್ರೀ ಸನ್ನಿಧಾನಂಗಳವರ ಅಮೃತಹಸ್ತದಿಂದ ನೆರವೇರಲಿದೆ.
ಮೇ 8ರಂದು ಬೆಳಗ್ಗೆ 8.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ದಿವ್ಯಸಾನ್ನಿಧ್ಯದಲ್ಲಿ ಅಷ್ಟೋತ್ತರಶತನಾಳಿಕೇರ ಗಣಪತಿ ಹವನ, ಸೃಷ್ಟಿಪುಣ್ಯಾಹ ವಾಚನ, ಶತಚಂಡೀ ಋತ್ವಿಕ್ವರಣ ಸಪ್ತಶತೀ ಪಾರಾಯಣ, ಚತುರ್ವೇದ ಪಾರಾಯಣ, ವಿಷ್ಣು ಭಾಗವತ, ದೇವೀ ಭಾಗವತ ಪಾರಾಯಣ ಆರಂಭಗೊಳ್ಳುವುದು.
9ರಂದುಬೆಳಗ್ಗೆ 11.30ಕ್ಕೆ ಮೃತ್ಯುಂಜಯ ಹವನ, 10ರಂದು ಬೆಳಗ್ಗೆ 11.30ಕ್ಕೆ ಪವಮಾನ ಹವನ, ಐಕಮತ್ಯ ಹವನ, 11ರಂದು ಸಂಜೆ 6.30ಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀದೇವೀ ದರ್ಶನ, ಧೂಳೀಪಾದಪೂಜೆ, ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು.
12ರಂದು ಬೆಳಗ್ಗೆ 11ಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯಸಾನ್ನಿಧ್ಯದಲ್ಲಿ 'ಶತಚಂಡಿಕಾ ಯಾಗದ ಪೂರ್ಣಾಹುತಿ', ಗುರುದರ್ಶನ, ಪಾದುಕಾಪೂಜೆ, ಭಿಕ್ಷಾವಂದನೆ, ಫಲಮಂತ್ರಾಕ್ಷತೆ, ರಾತ್ರಿ ಗುರುದರ್ಶನ, ಪಾದುಕಾಪೂಜೆ, ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು.
13ರಂದು ಬೆಳಗ್ಗೆ 9.30ಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಮೃತಹಸ್ತಗಳಿಂದ ಶ್ರೀ ಸತ್ಯನಾರಾಯಣ ದೇವರಿಗೆ ಲಕ್ಷಾರ್ಚನಾ ಕಲಶಾಭಿಷೇಕ,
ಅನುಗ್ರಹ ಭಾಷಣ, ಶ್ರೀಗುರುದರ್ಶನ, ಪಾದುಕಾಪೂಜೆ, ಗುರುಕಾಣಿಕೆ, ಫಲಮಂತ್ರಾಕ್ಷತೆ ನಡೆಯುವುದು.

