ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ನಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮಾಜದ ಕಟ್ಟಕಡೆಯ ಸಮುದಾಯದ ಧ್ವನಿಯಾಗಿ, ರಾಷ್ಟ್ರಕ್ಕೆ ನೀಡಿದ ಕೊಡುಗೆ ಮಹತ್ವದ್ದಾಗಿದ್ದು, ಸಮಾಜದ ಪ್ರಗತಿಗೆ ಭದ್ರ ಬುನಾದಿ ಹಾಕಿಕೊಟ್ಟಿರುವುದಾಗಿ ತಿಳಿಸಿದರು.
ಚಾಮರಾಜನಗರ ವಿವಿ ಉಪಕುಲಪತಿ ಪೆÇ್ರ.ಎಂ.ಆರ್.ಗಂಗಾಧರ್ ಮುಖ್ಯ ಭಾಷಣ ಮಾಡಿ, ಅಂಬೇಡ್ಕರ್ ಭಾರತವನ್ನು ಸೃಷ್ಟಿಸಿದ ಕಾಲಾತೀತ ನಾಯಕನಾಗಿದ್ದು, ಅವರ ವಿಚಾರಧಾರೆ ದೇಶದ ಪ್ರಗತಿಗೆ ಪೂರಕವಾಗಿರುವುದಾಗಿ ತಿಳಿಸಿದರು.
ಪ್ರಭಾರ ಕುಲಸಚಿವ ಪೆÇ್ರ.ವಿ.ಬಿ.ಸಮೀರ್ ಕುಮಾರ್, ಪರೀಕ್ಷಾ ನಿಯಂತ್ರಕ ಡಾ.ಆರ್.ಜಯಪ್ರಕಾಶ್, ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ಮಹಿಳಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪೆÇ್ರ. ಎಸ್. ಆಶಾ ಮತ್ತು ಡಾ. ರವಿಕುಮಾರ್ ಕಣಪರ್ತಿ ಉಪಸ್ಥಿತರಿದ್ದರು.



