HEALTH TIPS

Uttar Pradesh | ವಿಶ್ವದಲ್ಲೇ ಗರಿಷ್ಠ ತಾಪಮಾನ ದಾಖಲಿಸಿದ ಬಾಂದಾ!

 ಲಕ್ನೋ: ಒಣ ಉಷ್ಣಗಾಳಿ ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿ ಬೀಸುತ್ತಿರುವ ನಡುವೆಯೇ ಉತ್ತರ ಪ್ರದೇಶದ ಬಾಂದಾದಲ್ಲಿ ಸೋಮವಾರ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಮಂಗಳವಾರ ಪ್ರಕಟಿಸಿದೆ.

ವಿಶ್ವದ 10 ಅಗ್ರ ಅತ್ಯಂತ ಉಷ್ಣ ಪ್ರದೇಶಗಳಲ್ಲಿ 7 ಭಾರತದಲ್ಲಿ ದಾಖಲಾಗಿದ್ದರೆ, ಮೂರು ಪಾಕಿಸ್ತಾನದಲ್ಲಿವೆ. 


ಬಾಂದಾದಲ್ಲಿ ಬಿಸಿಲಿನ ಝಳ ವ್ಯಾಪಕವಾಗಿದ್ದು, ಸೋಮವಾರ 47.6 ಡಿಗ್ರಿ ಸೆಲ್ಷಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಭಾರತೀಯ ಹವಾಮಾನ ಇಲಾಖೆ ತಾಪಮಾನ ದಾಖಲೆಗಳನ್ನು ಇರಿಸಲು ಆರಂಭಿಸಿದ 1951 ರಿಂದ 75 ವರ್ಷಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎನಿಸಿದೆ.

ಕಳೆದ ಹದಿನೈದು ದಿನಗಳ ಪೈಕಿ ಏಳು ದಿನ ದೇಶದ ಗರಿಷ್ಠ ತಾಪಮಾನ ಇಲ್ಲಿ ದಾಖಲಾಗಿತ್ತು. 2019ರ ಜೂನ್ 10ರಂದು ಬಾಂದಾದಲ್ಲಿ 49.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿರುವುದು ಇದುವರೆಗಿನ ಗರಿಷ್ಠ ತಾಪಮಾನವಾಗಿದೆ.

ಬಾಂದಾ ಹೊರತುಪಡಿಸಿದರೆ ಪಾಕಿಸ್ತಾನದ ನವಾಬ್ ಶಹಾ 47.5 ಡಿಗ್ರಿ ಸೆಲ್ಷಿಯಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಜಾಕೊಬಾಬಾದ್ (47 ಡಿಗ್ರಿ), ಭಾರತದ ಅಮರಾವತಿ (46.6 ಡಿಗ್ರಿ), ವಾಧ್ರಾ (46.5), ಬರ್ಮೇರ್ ಮತ್ತು ಜೈಸಲ್ಮೇರ್ (46.4), ಅಕೋಲಾ (46.3), ಖಜುರಾಹೊ ಮತ್ತು ಪಾಕಿಸ್ತಾನದ ಪಾದ್ ಇದಾನ್ (46 ಡಿಗ್ರಿ) ನಂತರದ ಸ್ಥಾನಗಳಲ್ಲಿವೆ.

ಕೇಂದ್ರ ಭಾರತದಲ್ಲಿ ಪ್ರತಿ ಬಿರುಗಾಳಿ ಪರಿಸ್ಥಿತಿಯಿಂದಾಗಿ ವಿಧರ್ಭ ಪ್ರದೇಶದಿಂದ ಉತ್ತರ ಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತಿರುವುದು ತಾಪಮಾನ ಏರಿಕೆಗೆ ಪ್ರಮುಖ ಕಾರಣ ಎಂದು ಐಎಂಡಿ ಹಿರಿಯ ವಿಜ್ಞಾನಿ ಮುಹಮ್ಮದ್ ದಾನಿಷ್ ಹೇಳುತ್ತಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries