ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಎ.ಕೆ.ಎಂ.ಅಶ್ರಫ್ 20,703 ಮತಗಳ ಮುನ್ನಡೆ ಗಳಿಸಿದ್ದಾರೆ. 8ನೇ ಸುತ್ತಿನ ಅಂತ್ಯಕ್ಕೆ ಅವರ ಮತ ಗಳಿಕೆ 52,298ಕ್ಕೆ ಏರಿಕೆಯಾಗಿದ್ದರೆ, ಪ್ರತಿಸ್ಪರ್ಧಿ ಎನ್ ಡಿಎ ಅಭ್ಯರ್ಥಿ ಕೆ.ಸುರೇಂದ್ರನ್ (ಬಿಜೆಪಿ) 31,595 ಮತಗಳನ್ನು ಗಳಿಸಿದ್ದಾರೆ.
ಎಲ್ ಡಿಎಫ್ ಅಭ್ಯರ್ಥಿ ಕೆ.ಆರ್.ಜಯಾನಂದ 8311 ಮತಗಳನ್ನು ಗಳಿಸಿದ್ದಾರೆ. ಎಣಿಕೆ ಪ್ರಕ್ರಿಯೆ ಮುಂದುವರಿದಿದೆ.

