ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಕಾ ಕ್ಷೇತ್ರದಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ದೈವಗಳ ಕೋಲಗಳು ಭಕ್ತಿ, ಸಂಭ್ರಮದಿಂದ ನಡೆಯಿತು. ಶ್ರೀಭಂಡಾರ ಮನೆಯಿಂದ ಭಂಡಾರ ಆಗಮಿಸಿದ ನಂತರ ಶ್ರೀ ಗುಳಿಗ ದೈವದ ಕೋಲ ನಡೆಯಿತು.
ಶನಿವಾರ ರಾತ್ರಿ ನಡೆದ ಶ್ರೀ ಕೊರಗ ತನಿಯ ಜೋಡುಕೋಲಕ್ಕೆ ನೂರಾರು ಮಂದಿ ಭಕ್ತಾದಿಗಳು ಸಾಕ್ಷಿಗಳಾದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಕಾಳ್ಯಂಗಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಾಂತಕುಮಾರ್ ಮುಂಡಿತ್ತಡ್ಕ, ಪ್ರಶಾಂತಿ ಪ್ರಶಾಂತ್ ಟೀಚರ್, ಜಗದೀಶ್ ಕೂಡ್ಲು ಸುರೇಖಾ ದಯಾನಂದ ಟೀಚರ್ ಮೊದಲಾದವರು ಸಹಕರಿಸಿದರು.



